ಕೋಟೆಪುರ : ಟಿಪ್ಪು ಸುಲ್ತಾನ್ ಶಾಲೆಯಲ್ಲಿ ವಿನೂತನ ಮಾದರಿಯಲ್ಲಿ ವಾರ್ಷಿಕ ಕ್ರೀಡಾಕೂಟ

Update: 2016-12-23 12:18 GMT

ಮಂಗಳೂರು, ಡಿ.23: ದೇಶಭಕ್ತಿ ಗೀತೆ, ಮೆಹಂದಿ ಹಾಡು, ದೈಹಿಕ ಸಾಮರ್ಥ್ಯ ಹೆಚ್ಚಿಸುವ ಹಾಡಿನೊಂದಿಗೆ ನಡೆದ ದೈಹಿಕ ಕಸರತ್ತು. ಒಟ್ಟಿನಲ್ಲಿ ಮೈದಾನದಲ್ಲೇ ನಡೆದ ಕಾರ್ಯಕ್ರಮ ಹೊಸತನಕ್ಕೆ ಸಾಕ್ಷಿಯಾಯಿತು. ಇದು ಉಳ್ಳಾಲ ಕೋಟೆಪುರದ ಟಿಪ್ಪುಸುಲ್ತಾನ್ ಶಿಕ್ಷಣ ಸಂಸ್ಥೆಯಲ್ಲಿ ಕಂಡು ಬಂದ ಹೊಸ ಕಾರ್ಯಕ್ರಮ.

ಸಭಾಕಾರ್ಯಕ್ರಮದ ಸಂದರ್ಭದಲ್ಲೇ ಮೈದಾನದಲ್ಲಿ ಪ್ರಾಥಮಿಕ ಶಾಲೆಯ ಮಕ್ಕಳಿಂದ ಮೆಹಂದಿ ಹಾಡಿನ ಝಲಕ್, ಪ್ರೌಢಶಾಲೆ ವಿದ್ಯಾರ್ಥಿಗಳ ದೇಶಭಕ್ತಿ ಗೀತಾನೃತ್ಯ ಸಹಿತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಅದರ ಜೊತೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಂದ ದೈಹಿಕ ಕಸರತ್ತುಗಳೂ ನಡೆದವು.
ತಾಪಂ ಅಧ್ಯಕ್ಷ ಮುಹಮ್ಮದ್ ಮೋನು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಜಿಪಂ ಸದಸ್ಯೆ ಧನಲಕ್ಷ್ಮೀ ಗಟ್ಟಿ ಧ್ವಜವಂದನೆ ಸ್ವೀಕರಿಸಿದರು.

ಸೈಯದ್ ಮದನಿ ದರ್ಗಾ ಅಧ್ಯಕ್ಷ ಹಾಜಿ ಅಬ್ದುರ್ರಶೀದ್ ಅಧ್ಯಕ್ಷತೆ ವಹಿಸಿದ್ದರು.

ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಎಂ.ಮುಸ್ತಫಾ ಪಥ ಸಂಚಲನಕ್ಕೆ ಚಾಲನೆ ನೀಡಿದರು.

ದರ್ಗಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ತ್ವಾಹ ಕ್ರೀಡಾ ಜ್ಯೋತಿ ಬೆಳಗಿಸಿದರು.

ಚಾರಿಟೇಬಲ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಫ್ತಾರ್ ಹುಸೈನ್ ಧ್ವಾರೋಹಣಗೈದರು.

ನಗರಸಭಾಧ್ಯಕ್ಷ ಹುಸೈನ್ ಕುಂಞಿಮೋನು ದಳ ಪುರಸ್ಕಾರ ಪ್ರದಾನ ಮಾಡಿದರು.

ಉದ್ಯಮಿ ಎಚ್.ಕೆ.ಖಾದರ್ ಬಹುಮಾನ ವಿತರಿಸಿದರು.

ಕೋಟೆಪುರ ಜುಮಾ ಮಸೀದಿ ಅಧ್ಯಕ್ಷ ಯು.ಕೆ.ಬಾವ ಇಸ್ಮಾಯಿಲ್, ದರ್ಗಾ ಉಪಾಧ್ಯಕ್ಷರಾದ ಮೋನು ಇಸ್ಮಾಯೀಲ್, ಬಾವ ಮುಹಮ್ಮದ್, ಕೋಶಾಧಿಕಾರಿ ಯು.ಕೆ. ಇಲ್ಯಾಸ್, ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಇಬ್ರಾಹೀಂ, ಎ.ಕೆ. ಮೊಹಿಯುದ್ದೀನ್, ಸದಸ್ಯ ಯು.ಹಸೈನಾರ್, ಆಡಳಿತಾಧಿಕಾರಿ ಅಬ್ದುಲ್ಲತೀಫ್, ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕೆ.ಎಂ.ಕೆ.ಮಂಜನಾಡಿ, ಸಂಸ್ಥೆಯ ಮಾಜಿ ಸಂಚಾಲಕ ಯು.ಕೆ.ಅಬ್ಬಾಸ್, ಯು.ಮುಹಮ್ಮದ್ ಶಾಪಿ, ಅರಬಿಕ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಅಮೀರ್, ಆಸಿಫ್ ಅಬ್ದುಲ್ಲಾ ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕ ಎಂ.ಎಚ್.ಮಲಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಹ ಶಿಕ್ಷಕಿಯರಾದ ಮೆಟಿಲ್ಡಾ ಡಿಸೋಜ ಹಾಗೂ ಮಮತಾ ಬಹುಮಾನ ವಿಜೇತರ ಹೆಸರು ವಾಚಿಸಿದರು.

ಪ್ರಭಾರ ಮುಖ್ಯ ಶಿಕ್ಷಕಿ ಗೀತಾ ಡಿ. ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News