ಬೆಂಗ್ರೆ ನಿವಾಸಿಗಳ ಹಕ್ಕುಪತ್ರಕ್ಕಾಗಿ ಸರ್ವೇ ಕೆಲಸ ಆರಂಭ

Update: 2016-12-23 12:37 GMT

ಮಂಗಳೂರು, ಡಿ.23: ಬೆಂಗ್ರೆಯಲ್ಲಿ ಅನಾದಿಕಾಲದಿಂದ ಸರಕಾರಿ ಭೂಮಿಯಲ್ಲಿ ಮನೆ ಕಟ್ಟಿಕೊಂಡು ವಾಸವಿರುವವರಿಗೆ ಸರಕಾರದಿಂದ ನಿವೇಶನಗಳಿಗೆ ಹಕ್ಕುಪತ್ರ ಕೊಡುವ ಬಗ್ಗೆ ಶಾಸಕ ಜೆ.ಆರ್.ಲೋಬೊರ ಉಸ್ತುವಾರಿಯಲ್ಲಿ ಸಮೀಕ್ಷೆ ಕಾರ್ಯ ಆರಂಭಿಸಲಾಗಿದೆ.

ಕಸಬಾ ಬೆಂಗ್ರೆ, ತೋಟ ಬೆಂಗ್ರೆ, ಕುದ್ರೋಳಿ ಬೆಂಗ್ರೆಯಲ್ಲಿ ಸುಮಾರು 3 ಸಾವಿರ ಕುಟುಂಬಗಳು ನೆಲೆಸಿದ್ದು, ಎಲ್ಲರಿಗೂ ಹಕ್ಕುಪತ್ರ ನೀಡುವುದು ನನ್ನ ಕನಸಾಗಿದೆ. 10 ಮಂದಿ ಸರ್ವೇಯರ್‌ಗಳು ಮೂರು ತಂಡಗಳಾಗಿ ಸರ್ವೇ ಕೆಲಸ ಆರಂಭಿಸಿದೆ. ಮುಂದಿನ 2-3 ತಿಂಗಳೊಳಗೆ ಸರ್ವೇ ಕೆಲಸ ಪೂರ್ಣಗೊಳಿಸುತ್ತಾರೆ. ಆನಂತರ ಕಂದಾಯ ಇಲಾಖೆಯ ಅಧಿಕಾರಿಗಳು ತಪಾಸಣೆ ಕೈಗೊಳ್ಳುತ್ತಾರೆ ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News