×
Ad

ಬಂಟ್ವಾಳ : ನಾಪತ್ತೆಯಾಗಿದ್ದ ಅಪ್ರಾಪ್ತೆ ಕೊಳ್ಳೆಗಾಲದಲ್ಲಿ ಪತ್ತೆ

Update: 2016-12-23 20:13 IST

ಬಂಟ್ವಾಳ , ಡಿ.23 : ದೇವಸ್ಥಾನಕ್ಕೆ ಹೋಗುವುದಾಗಿ ಹೇಳಿ ನಾಪತ್ತೆಯಾಗಿದ್ದ ಅಪ್ರಾಪ್ತೆಯನ್ನು ವಿಟ್ಲ ಪೊಲೀಸರ ತಂಡ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ಸಮೀಪ ಶುಕ್ರವಾರ ಪತ್ತೆ ಹಚ್ಚಿದ್ದಾರೆ.

ಪೆರುವಾಯಿ ಗ್ರಾಮದ 17 ವರ್ಷದ ಯುವತಿ ಡಿ. 11ರಂದು ಮನೆಯಿಂದ ವಿಟ್ಲ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದು ಬಳಿಕ ಮನೆಗೆ ಹಿಂದಿರುಗಿರಲಿಲ್ಲ.

ಈ ಬಗ್ಗೆ ಠಾಣೆಗೆ ದೂರು ನೀಡಲಾಗಿತ್ತು. ಯುವತಿ ದೂರವಾಣಿ ಟವರ್ ಲೊಕೇಶ್ ಆಧಾರದಲ್ಲಿ ತನಿಖೆ ಆರಂಭಿಸಿದ ಪೊಲೀಸರು ಯುವತಿಯನು ಚಾಮರಾಜ ನಗರ ಜಿಲ್ಲೆಯ ಕೊಳ್ಳೆಗಾಲ ಮುಳ್ಳೂರು ಎಂಬಲ್ಲಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News