×
Ad

ಉಡುಪಿ : ರೈತರ ದಿನಾಚರಣೆ

Update: 2016-12-23 20:26 IST

 ಉಡುಪಿ, ಡಿ.23: ರೈತ ದೇಶದ ಬೆನ್ನೆಲುಬೆನಿಸಿದ್ದರೂ, ಈಚಿನ ಕೆಲವು ವರ್ಷಗಳಿಂದ ರೈತರ ಸ್ಥಿತಿ ಚಿಂತಾಜನಕವಾಗಿದೆ. ಹೆಚ್ಚು ಹೆಚ್ಚು ರೈತರು ಆತ್ಮಹತ್ಯೆಗೆ ಮುಂದಾಗುತಿದ್ದಾರೆ. ಇದನ್ನು ತಡೆಗಟ್ಟಲು ಸರಕಾರದ ಎಲ್ಲಾ ಇಲಾಖೆಗಳಿಂದ ರೈತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಆಗಬೇಕಿದೆ ಎಂದು ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಅಭಿಪ್ರಾಯಪಟ್ಟಿದ್ದಾರೆ. 

ಶುಕ್ರವಾರ ಅಂಬಲಪಾಡಿಯ ಪ್ರಗತಿ ಸೌಧದಲ್ಲಿ, ಜಿಲ್ಲಾ ಕೃಷಿ ಇಲಾಖೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಉಡುಪಿ, ಆತ್ಮ ಅನುಷ್ಠಾನ ಸಮಿತಿ ಉಡುಪಿ ಜಿಲ್ಲೆ ಇವುಗಳ ಸಹಯೋಗದಲ್ಲಿ, ಆತ್ಮ ಯೋಜನೆಯಡಿ ರೈತರಿಗೆ ತರಬೇತಿ ಹಾಗೂ ರೈತರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಶುಕ್ರವಾರ ಅಂಬಲಪಾಡಿಯ ಪ್ರಗತಿ ಸೌದಲ್ಲಿ,ಜಿಲ್ಲಾ ಕೃಷಿ ಇಲಾಖೆ,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಉಡುಪಿ, ಆತ್ಮ ಅನುಷ್ಠಾನ ಸಮಿತಿ ಉಡುಪಿ ಜಿಲ್ಲೆ ಇವುಗಳ ಸಹಯೋಗದಲ್ಲಿ, ಆತ್ಮ ಯೋಜನೆಯಡಿ ರೈತರಿಗೆ ತರಬೇತಿ ಹಾಗೂ ರೈತರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ರೈತರಿಗೆ ವಿವಿಧ ತರಬೇತಿಗಳನ್ನು ನೀಡಿ, ಕೃಷಿಯಲ್ಲಿ ಅಧಿಕ ಇಳುವರಿ ಪಡೆಯುವಂತೆ ಮಾಡುವುದರ ಮೂಲಕ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸವಾಗಬೇಕು. ಹಾಗೂ ಯುವ ಜನತೆ ಕೃಷಿ ಚಟುವಟಿಕೆಗಳಲ್ಲಿ ಹೆಚ್ಚು ಹೆಚ್ಚು ತೊಡಗುವಂತೆ ಮಾಡಿ ಕೃಷಿ ಕ್ಷೇತ್ರವನ್ನು ಹೆಚ್ಚು ಬಲಗೊಳಿಸುವ ಕೆಲಸ ವಾಗಬೇಕು ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾ ಭಿವೃದ್ಧಿ ಯೋಜನೆಯ ನಿರ್ದೇಶಕ ಪುರುಷೋತ್ತಮ ಪಿ.ಕೆ. ಮಾತನಾಡಿ, ಇಂದು ರೈತ ದಿನದಿಂದ ದಿನಕ್ಕೆ ಕ್ಷೀಣಿಸುತಿದ್ದರೆ, ರೈತರ ಸಂಖ್ಯೆ ಇಳಿಮುಖವಾಗುತ್ತಿದೆ. ರೈತರ ಮಕ್ಕಳು ಇಂದು ನಗರದತ್ತ ಮುಖಮಾಡಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಹೂಡಿದ ಬಂಡವಾಳ ಕೈಸೇರುತ್ತಿಲ್ಲ ಎಂಬುದು ಅವರ ಕೊರಗಾಗಿದೆ ಎಂದರು.

ಕರಾವಳಿಯಲ್ಲಿ ತುಂಡುಭೂಮಿ ಹೆಚ್ಚಾಗಿರುವ ಕಾರಣ, ಇಲ್ಲಿ ಯಾಂತ್ರಿಕ ಬೇಸಾಯಕ್ಕೆ ಇತಿಮಿತಿಗಳಿವೆ. ಇದೀಗ ಅಕ್ಕಪಕ್ಕದ 5-6 ಮಂದಿ ರೈತರು ಗುಂಪಾಗಿ ಯಂತ್ರಗಳ ಮೂಲಕ ಒಂದೇ ದಿನ ನೇಜಿ ಮಡಿ ಮಾಡಿ, ಒಂದೇ ದಿನ ಉಳಿಮೆ ಹಾಗೂ ನಾಟಿ ಮಾಡುವ ಮೂಲಕ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಎಸ್‌ಕೆಡಿಆರ್‌ಡಿಪಿ ಪ್ರಗತಿ ಬಂಧು ರೈತರ ಗುಂಪು ಇದನ್ನು ಅನುಷ್ಠಾನಗೊಳಿಸುತ್ತಿದೆ ಎಂದರು. ಕರಾವಳಿಯಲ್ಲಿ ತುಂಡು ಭೂಮಿ ಹೆಚ್ಚಾಗಿರುವ ಕಾರಣ,ಇಲ್ಲಿ ಯಾಂತ್ರಿಕ ಬೇಸಾಯಕ್ಕೆ ಇತಿಮಿತಿಗಳಿವೆ. ಇದೀಗ ಅಕ್ಕಪಕ್ಕದ 5-6 ಮಂದಿ ರೈತರು ಗುಂಪಾಗಿ ಯಂತ್ರಗಳ ಮೂಲಕ ಒಂದೇ ದಿನ ನೇಜಿಮಡಿ ಮಾಡಿ, ಒಂದೇ ದಿನ ಉಳುಮೆ ಹಾಗೂ ನಾಟಿ ಮಾಡುವ ಮೂಲಕ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಎಸ್‌ಕೆಡಿಆರ್‌ಡಿಪಿಪ್ರಗತಿಬಂಧು ರೈತರ ಗುಂಪು ಇದನ್ನು ಅನುಷ್ಠಾನಗೊಳಿಸುತ್ತಿದೆ ಎಂದರು.

ಉಡುಪಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಉಡುಪಿ ಎನ್‌ಎಸ್‌ಐಟಿ ಪ್ರಾಂಶುಪಾಲ ಅಶೋಕ ಕೆ., ಜಂಟಿ ಕೃಷಿ ನಿರ್ದೇಶಕ ಚಂದ್ರಶೇಖರ ನಾಯ್ಕಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಉಡುಪಿಯ ಸಹಾಯಕ ಕೃಷಿ ನಿರ್ದೇಶಕ ಮೋಹನ್ ರಾಜ್ ಸ್ವಾಗತಿಸಿ, ಸಹಾಯಕ ಕೃಷಿ ಅಧಿಕಾರಿ ಸತೀಶ್ ಕಾರ್ಯಕ್ರಮ ನಿರೂಪಿಸಿದರು. ಉಡುಪಿಯ ಸಹಾಯಕ ಕೃಷಿ ನಿರ್ದೇಶಕ ಮೋಹನ್ ರಾಜ್ ಸ್ವಾಗತಿಸಿ, ಸಹಾಯಕ ಕೃಷಿ ಅಧಿಕಾರಿ ಸತೀಶ್ ಕಾರ್ಯಕ್ರಮ ನಿರೂಪಿಸಿದರು. 

ಭತ್ತದ ಬೆಳೆ ವಿಜೇತರಿಗೆ ಬಹುಮಾನ

ಕಾರ್ಯಕ್ರಮದಲ್ಲಿ 2016-17ನೇ ಸಾಲಿನ ಕೃಷಿ ಪ್ರಶಸ್ತಿ ಯೋಜನೆಯಡಿ ಜಿಲ್ಲಾ ಮಟ್ಟದಲ್ಲಿ ಹಾಗೂ ಮೂರು ತಾಲೂಕು ಮಟ್ಟದ ಬೆಳೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನಗಳನ್ನು ವಿತರಿಸಿ ಸನ್ಮಾನಿಸಲಾಯಿತು.


ಜಿಲ್ಲಾ ಮಟ್ಟದಲ್ಲಿ: 1.ಶೇಷಿ ಬಿನ್ ಅಬ್ಬಕ್ಕ, ಕೆರ್ಗಾಲ್ (ಹೆಕ್ಟೇರ್‌ಗೆ 88.20 ಕ್ವಿಂಟಾಲ್), 2. ಮಹಾಲಿಂಗ ದೇವಾಡಿಗ, ಬಸ್ರೂರು(84.62), 3.ಈಜಿಲ್ ಡಿಸಿಲ್ವಾ, ವಾರಂಬಳ್ಳಿ ಬ್ರಹ್ಮಾವರ (83.89).

ಉಡುಪಿ ತಾಲೂಕು: 1.ರಘುರಾಮ ಮಡಿವಾಳ, ಐರೋಡಿ (82.96), 2.ರಾಧು ಮರಕಾಲ್ತಿ, ಕೋಟತಟ್ಟು (80.92), 3.ಬಾಬುರಾಯ ಆಚಾರಿ, ಚೇರ್ಕಾಡಿ (80.28. ಕುಂದಾಪುರ ತಾಲೂಕು: 1.ಬಿ.ನಿತ್ಯಾನಂತ ಶೇರೆಗಾರ, ಬೀಜಾಡಿ(82.70), 2.ಸುಕುಮಾರ ಶೆಟ್ಟಿ, ದೇವಲ್ಕುಂದ(79.57), 3. ಕರಿಯಣ್ಣ ಶೆಟ್ಟಿ, ಅಮಾಸೆಬೈಲು(76.18). ಕಾರ್ಕಳ ತಾಲೂಕು: 1.ಬಾಬು ಸಪಳಿಗ, ಕೌಡೂರು(81.26), 2.ಸಚ್ಚಿದಾನಂದ ಎಸ್.ಪ್ರಭು, ಕಣಜಾರು (78.89), 3.ಭಾಸ್ಕರ ಶೆಟ್ಟಿ, ಮುಂಡ್ಕೂರು(75.84).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News