×
Ad

ಮಂಗಳೂರು : ಬಿಳಿಚುಕ್ಕೆ ಪ್ರಕಾಶನದ ನಾಲ್ಕು ಕೃತಿಗಳ ಅನಾವರಣ

Update: 2016-12-23 20:33 IST

ಮಂಗಳೂರು, ಡಿ.23: ಬಿಳಿಚುಕ್ಕೆ ಪ್ರಕಾಶನ ಪ್ರಕಟಿಸಿದ ಫೋಟೊಗ್ರಾಫರ್ ದಿ. ಅಹ್ಮದ್ ಅನ್ವರ್‌ರ ‘ಪಯಣಿಗನ ಪದ್ಯಗಳು’, ಸಾಹಿತಿ ಮುಹಮ್ಮದ್ ಬಡ್ಡೂರ್‌ರ ಕವನ ಸಂಕಲನ ‘ಬಡ್ಡೂರರ ಸದ್ದುಗಳು’, ಪತ್ರಕರ್ತೆ ಶಹನಾಝ್ ಎಂ.ರವರ ಕಾದಂಬರಿ ‘ನಿನಗಾಗಿ’, ಪತ್ರಕರ್ತ ಏ.ಕೆ. ಕುಕ್ಕಿಲರ ಲಲಿತ ಪ್ರಬಂಧ ‘ಸರಸ-ಸಲ್ಲಾಪ’ ಕೃತಿಗಳು ನಗರದ ಪುರಭವನದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಅನಾವರಣಗೊಂಡಿತು.

ಹಾಸ್ಯ ಲೇಖಕಿ ಭುವನೇಶ್ವರಿ ಹೆಗಡೆ ಮಾತನಾಡಿ, ಸುಖ ಮತ್ತು ದುಃಥವನ್ನು ಒಳಗೊಂಡ ಬದುಕನ್ನು ಸ್ವೀಕರಿಸುವ ವಿನಮ್ರತೆಯನನು ಸಾಹಿತ ಯ ಕಲಾಸಿಕೊಡುತ್ತದೆ. ಇಂತಹ ಸಾಹಿತ್ಯ ಸಮಾಜಕ್ಕೆ ಬೆಳಕು ನೀಡುವಂತಾಗಬೇಕು ಎಂದರು.

ಮಂಗಳೂರು ವಿವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಸತ್ಯನಾರಾಯಣ ಮಲ್ಲಿಪಟ್ಟಣ ಮಾತನಾಡಿ ಶುಭ ಹಾರೈಸಿದರು.

ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ, ಮುಸ್ಲಿಮ್ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು.ಎಚ್., ಮಹಿಳಾ ಮಂಡಲಗಳ ಒಕ್ಕೂಟದ ಸ್ಥಾಪಕಾಧ್ಯಕ್ಷೆ ಕೆ.ಎ.ರೋಹಿಣಿ ಶುಭ ಹಾರೈಸಿದರು.

ಬಳಿಕ ಮುಹಮ್ಮದ್ ಬಡ್ಡೂರ್, ನಾದ ಮಣಿನಾಲ್ಕೂರು, ಬಶೀರ್ ಅಹ್ಮದ್ ಕಿನ್ಯಾ, ಉಮರ್ ಮೌಲವಿ ಮಡಿಕೇರಿ, ಅಝ್ಹರುಲ್ಲಾ ಖಾಸಿಮಿ, ಸಲೀಮ್ ಬೋಳಂಗಡಿ ಗಾಯನಗೋಷ್ಠಿ ನಡೆಸಿಕೊಟ್ಟರು.
 

ಮರ್ಹೂಂ ಅಹ್ಮದ್ ಅನ್ವರ್‌ರ ನೆನಪಿಗಾಗಿ ‘ನೀನಾರಿಗಾದೆ ಮಾನವ’ ಪದ್ಯವನ್ನು ಹುಸೈನ್ ಕಾಟಿಪಳ್ಳ ಹಾಡಿದರು.

ಬಿಳಿಚುಕ್ಕೆ ಪ್ರಕಾಶನದ ಕಾರ್ಯದರ್ಶಿ ಶೌಕತ್ ಅಲಿ ಸ್ವಾಗತಿಸಿದರು. ಬಿಳಿಚುಕ್ಕೆ ಪ್ರಕಾಶನದ ಅಧ್ಯಕ್ಷ ಎಸ್.ಎಂ.ಮುತ್ತಲಿಬ್ ವಂದಿಸಿದರು.

ಬಿ.ಎ.ಮುಹಮ್ಮದ್ ಅಲಿ ಕಾರ್ಯಕ್ರಮ ನಿರೂಪಿಸಿದರು.


ತಂದೆಯ ಕೃತಿ ಮಗನಿಂದ- ಮಗನ ಕೃತಿ ತಾಯಿಯಿಂದ ಬಿಡುಗಡೆ

 ಬಹುಶಃ ‘ಕೃತಿ ಬಿಡುಗಡೆ’ಯಂತಹ ಕಾರ್ಯಕ್ರಮಗಳಲ್ಲಿ ಅಪರೂಪದ ಅವಕಾಶ ಮತ್ತು ಸಂತಸದ ಕ್ಷಣಗಳು ಕೆಲವೇ ಕೆಲವು ಸಾಹಿತಿಗಳಿಗೆ ಲಭಿಸುತ್ತದೆಯೋ ಏನೋ?

ಶುಕ್ರವಾರ ನಡೆದ ಕೃತಿಗಳ ಬಿಡುಗಡೆ ಕಾರ್ಯಕ್ರಮವು ಅಪೂರ್ವ ಸನ್ನಿವೇಶಕ್ಕೆ ಸಾಕ್ಷಿಯಾಯಿತು.

ಇತ್ತೀಚೆಗೆ ನಿಧನರಾದ ಅಹ್ಮದ್ ಅನ್ವರ್‌ರ ‘ಪಯಣಿಗನ ಪದ್ಯಗಳು’ ಕೃತಿಯನ್ನು ಅನ್ವರ್‌ರ ಪುತ್ರ ಸಲ್ಮಾನ್ ಬಿಡುಗಡೆಗೊಳಿಸಿದರು.

ಸಾಹಿತಿ ಭುವನೇಶ್ವರ ಹೆಗಡೆ ಪ್ರಥಮ ಪ್ರತಿ ಸ್ವೀಕರಿಸಿದರು.

ಪತ್ರಕರ್ತ ಏ.ಕೆ.ಕುಕ್ಕಿಲರ ‘ಸರಸ-ಸಲ್ಲಾಪ’ ಕೃತಿಯನ್ನು ಅವರ ತಾಯಿ ಆಸಿಯಮ್ಮ ಬಿಡುಗಡೆಗೊಳಿಸಿದರು. ಕುಕ್ಕಿಲರ ಪತ್ನಿ ಶಮೀಮಾ ಪ್ರಥಮ ಪ್ರತಿ ಸ್ವೀಕರಿಸಿದರು.

ಉಳಿದಂತೆ ಮುಹಮ್ಮದ್ ಬಡ್ಡೂರ್‌ರ ‘ಬಡ್ಡೂರರ ಸದ್ದುಗಳು’ ಕೃತಿಯನ್ನು ಕೆ.ಎಂ.ಶರೀಫ್ ಬಿಡುಗಡೆಗೊಳಿಸಿದರೆ, ಡಾ.ಸತ್ಯನಾರಾಯಣ ಮಲ್ಲಿಪಟ್ಟಣ ಪ್ರಥಮ ಪ್ರತಿ ಸ್ವೀಕರಿಸಿದರು. ಶಹನಾಝ್‌ರ ‘ನಿನಗಾಗಿ’ ಕಾದಂಬರಿಯನ್ನು ಕೆ.ಎ.ರೋಹಿಣಿ ಬಿಡುಗಡೆಗೊಳಿಸಿದರೆ, ಪ್ರಥಮ ಪ್ರತಿಯನ್ನು ಅವರ ಪತಿ ಮುತ್ತಲಿಬ್ ಸ್ವೀಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News