×
Ad

ಪ್ರವಾಸೋದ್ಯಮ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ: ಉಡುಪಿ ಜಿಲ್ಲಾಧಿಕಾರಿ

Update: 2016-12-23 20:41 IST

 ಉಡುಪಿ, ಡಿ.23: ಪ್ರವಾಸೋದ್ಯಮ ಅಭಿವೃದ್ಧಿ ಸಂಬಂಧ ಕೆಆರ್‌ಐಡಿಎಲ್, ಮಲ್ಪೆ, ಶಿರೂರು, ಒತ್ತಿನೆಣೆ ಬೀಚ್‌ಗಳಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ಜನವರಿ ತಿಂಗಳೊಳಗೆ ಸಂಪೂರ್ಣಗೊಳಿಸುವಂತೆ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದ್ದಾರೆ. 

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಿದ ಪ್ರವಾಸೋದ್ಯಮ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಈಗಾಗಲೇ ಪ್ರಗತಿ ಯಲ್ಲಿರುವ ಎಲ್ಲ ಕಾಮಗಾರಿಗಳನ್ನು ಜನವರಿ ತಿಂಗಳೊಳಗೆ ಮುಗಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಲೈಟಿಂಗ್ ಹಾಗೂ ಕಾಲುದಾರಿ ನಿರ್ಮಾಣ ಗಳನ್ನು ಮುಗಿಸಲು, ಚಲಿಸಬಲ್ಲ ವಾಚ್‌ಟವರ್, ಕಸದ ಬುಟ್ಟಿಗಳನ್ನು ಶೀಘ್ರದಲ್ಲೇ ಜನರ ಅನುಕೂಲಕ್ಕೆ ಮಾಡಿಕೊಡಿ ಎಂದು ಇಂಜಿನಿಯರ್‌ಗಳಿಗೆ ಸೂಚಿಸಿದರು.

 ಒತ್ತಿನೆಣೆ, ಕುಂದಾಪುರದ ಲೈಟ್‌ಹೌಸ್ ಬೀಚ್‌ನ್ನು ಟೆಂಡರ್ ಮಾಡುವುದ ರಿಂದ ಪ್ರವಾಸಿಗರಿಗೆ ಮೂಲಭೂತ ಸೌಕರ್ಯ ಒದಗಿಸಲು ನೆರವಾಗಲಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ಎಲ್ಲ ಹೋಮ್‌ಸ್ಟೇಗಳು ಕಡ್ಡಾಯವಾಗಿ ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಆದೇಶಿಸಿದರು.

ಒತ್ತಿನೆಣೆ, ಕುಂದಾಪುರದ ಲೈಟ್‌ಹೌಸ್ ಬೀಚ್‌ನ್ನು ಟೆಂಡರ್ ಮಾಡುವುದ ರಿಂದ ಪ್ರವಾಸಿಗರಿಗೆ ಮೂಲಭೂತ ಸೌಕರ್ಯ ಒದಗಿಸಲು ನೆರವಾಗಲಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.

ಎಲ್ಲ ಹೋಮ್‌ಸ್ಟೇಗಳು ಕಡ್ಡಾಯವಾಗಿ ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಆದೇಶಿಸಿದರು.

ಪಡುತೋನ್ಸೆಯಲ್ಲಿ ಹೌಸ್‌ಬೋಟ್ ನಡೆಸಲು ಅನುಮತಿಯನ್ನು ನೀಡಲು ಸಭೆಯಲ್ಲಿ ಸಮ್ಮತಿಸಲಾಯಿತು.

ಪ್ರಸಕ್ತ ಸಾಲಿನಲ್ಲಿ ಪ್ರವಾಸಿ ಟ್ಯಾಕ್ಸಿ ಒದಗಿಸುವ ಸಂಬಂಧ ಅರ್ಜಿಗಳು ಬಂದಿದ್ದು, ಒಂದು ವಾರ ಕಾಲ ಆಕ್ಷೇಪ ಆಲಿಸಲು ಅವಕಾಶ ನೀಡಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡ ದಿಂದ ಒಟ್ಟು 28 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಒಬಿಸಿಯಡಿ 41 ಅರ್ಜಿ ಸ್ವೀಕೃತಗೊಂಡಿವೆ. ಅರ್ಹತೆಯ ಆಧಾರದ ಮೇಲೆ ಟ್ಯಾಕ್ಸಿ ಹಂಚಿಕೆ ಮಾಡಲಾ ಗುವುದು ಎಂದು ಇಲಾಖಾಧಿಕಾರಿ ಜಿಲ್ಲಾಧಿಕಾರಿಗಳಿಗೆ ವಿವರಿಸಿದರು.

ಸಭೆಯಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಬೀಚ್ ಅಭಿವೃದ್ಧಿಗೆ ಟೆಂಡರ್ ಪಡೆದ ಪ್ರತಿನಿಧಿಗಳಾದ ಸುದೇಶ್, ಮನೋಹರ್ ಶೆಟ್ಟಿ, ಯತೀಶ್ ಬೈಕಂಪಾಡಿ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News