ರಾಯಲ್ ಎನ್‌ಫೀಲ್ಡ್ ಸಿಬ್ಬಂದಿಗೆ ಕಿರುಕುಳ: ದೂರು
Update: 2016-12-23 22:32 IST
ಮಂಗಳೂರು, ಡಿ. 23: ರಾಯಲ್ ಎನ್‌ಫೀಲ್ಡ್ ಸಂಸ್ಥೆಯ ಸಿಬ್ಬಂದಿಗೆ ಕಿರುಕುಳ ನೀಡಿದ ಕುರಿತು ಆಡಳಿತ ಮಂಡಳಿ ವಿರುದ್ಧ ನಗರದ ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನೂತನವಾಗಿ ನೇಮಕವಾದ ಮಾನವ ಸಂಪನ್ಮೂಲ ಅಧಿಕಾರಿಯಾಗಿರುವ ಪ್ರೀತಂ ಶೆಟ್ಟಿ ಎಂಬವರು ಅಟೋಮೋಬೈಲ್ಸ್ ಸಿಬ್ಬಂದಿ ಸುಶಾಂತ್ ಎಂಬವರಿಗೆ ಕಿರುಕುಳ ನೀಡಿರುವುದಾಗಿ ಆರೋಪಿಸಲಾಗಿದೆ.
ನಗರದ ಬಳ್ಳಾಲ್‌ಬಾಗ್ ಬಳಿಯಿರುವ ರಾಯಲ್ ಎನ್‌ಫೀಲ್ಡ್ ಬೈಕುಗಳ ಅಧಿಕೃತ ಮಾರಾಟಗಾರರಾದ ಫ್ರಂಟ್ ಲೈನ್ ಆಟೋಮೊಬೈಲ್ಸ್‌ನ ಸಿಬ್ಬಂದಿ ತಮ್ಮ ಆಡಳಿತ ಮಂಡಳಿ ವಿರುದ್ಧ ಈ ಕಿರುಕುಳ ದೂರು ಹೊರಿಸಿದ್ದಾರೆ.
ಇತರ 15 ಮಂದಿ ಸಿಬ್ಬಂದಿ ದೂರಿನ ಪ್ರತಿಗೆ ಹಸ್ತಾಕ್ಷರ ಹಾಕಿದ್ದಾರೆ.
ಈ ಬಗ್ಗೆ ಬರ್ಕೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.