ಎಸ್ಸೆಸ್ಸೆಫ್ ಎಸ್ ವೈಎಸ್ ವತಿಯಿಂದ ಮೀಲಾದುನ್ನಬೀ ಕಾರ್ಯಕ್ರಮ
ಮೂಡುಬಿದಿರೆ, ಡಿ.23 : ಎಸ್ಸೆಸ್ಸೆಫ್ ಎಸ್ ವೈಎಸ್ ಗುಂಡುಕಲ್ ಶಾಖೆ ವತಿಯಿಂದ ಮೀಲಾದುನ್ನಬೀ ಕಾರ್ಯ ಕ್ರಮ ಮರ್ಹೂo "ಅಹ್ಮದ್ " ರವರ ಮನೆಯoಗಳದಲ್ಲಿ ಇತ್ತೀಚೆಗೆ ನಡೆಯಿತು.
ಅಬ್ದುಲ್ ಸಲಾo ಮದನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಅಬ್ದುಲ್ ಅಝೀಝ್ ಸಹದಿ ಉದ್ಘಾಟಿಸಿದರು.
ತದನಂತರ ಮಕ್ಕಳ ಕಾರ್ಯ ಕ್ರಮ ನಡೆಯಿತು. ದುಃಅ ಹಾಗೂ ನಸೀಅತ್ ಗೆ ಅಸಯ್ಯಿದ್ ಝೈನುಲ್ ಆಬಿದ್ ಅಲ್ ಜಮಾಲುಲೈಲ್ ತಂಙಳ್ ಕಾಜೂರ್ ನೇತೃತ್ವ ವಹಿಸಿದ್ದರು. ಹುಸೈನ್ ಮುಈನಿ ಅಲ್ ಅಹ್ಸನಿ ರವರು ಮಾತನಾಡಿದರು.
ಗುಲಾo ಹಾಜಿ,ಇಲ್ಯಾಸ್ ಮದನಿ ಕಾಶಿಪಟ್ನ, ಶೇಖ್ ಪಡುಬಿದ್ರೆ, ಶಾಹುಲ್ ಹಮೀದ್ ಬಜ್ಪೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ವೇದಿಕೆಯಲ್ಲಿ ದಾರುಲ್ ಉಲೂo ಸುನ್ನೀ ಮದ್ರಸ ಮುಖ್ಯ ಅಧ್ಯಾಪಕ ಮುಖ್ತಾರ್ ನಿಝಾಮಿ,ಅಬೂಬಕರ್ ಮುಸ್ಲಿಯಾರ್,ಫೈರೋಝ್ ಸಹದಿ ಅಲ್ ಮುಈನಿ,ಎo ಬಿ ಶರೀಫ್ ,ಅಬ್ದುಲ್ಲಾ, ಎo ಎಚ್ ಉಸ್ಮಾನ್,ಕೆ.ಸಿ.ಎಫ್ ಕಾರ್ಯಕರ್ತ ಇಸ್ಹಾಕ್ ಉಪಸ್ಥಿತರಿದ್ದರು.
ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಅನ್ನದಾನ ಮಾಡಲಾಯಿತು.
ಮುಸ್ತಫ ಮುಈನಿ ಸ್ವಾಗತಿಸಿ ವಂದಿಸಿದರು.