ಡಿ.25ರಂದು ಬಜಾಲ್‍ನಲ್ಲಿ ಕುರ್‍ಆನ್ ಸಂದೇಶಗಳ ಪ್ರದರ್ಶನ ಮತ್ತು ಪುಸ್ತಕ ಮೇಳ
ಮಂಗಳೂರು, ಡಿ.23 : ಸೌತ್ ಕರ್ನಾಟಕ ಸಲಫಿ ಮೂವ್‍ಮೆಂಟ್‍ನ ವತಿಯಿಂದ ಹಮ್ಮಿಕೊಳ್ಳಲಾದ ಕುರ್‍ಆನ್ ಸಂದೇಶ ಪ್ರಚಾರ ಅಭಿಯಾನದ ಅಂಗವಾಗಿ ಎಸ್.ಕೆ.ಎಸ್.ಎಮ್. ಬಜಾಲ್ ಘಟಕದ ವತಿಯಿಂದ ಡಿ.25ರಂದು ಬೆಳಗ್ಗೆ ಗಂಟೆ 10 ಕ್ಕೆ ಬಜಾಲ್ ಜಲ್ಲಿಗುಡ್ಡೆ ಜಂಕ್ಷನ್‍ನಲ್ಲಿ ಕುರ್‍ಆನ್ ಸಂದೇಶಗಳ ಪ್ರದರ್ಶನ ಮತ್ತು ಪುಸ್ತಕ ಮೇಳವು ಜರಗಲಿದೆ.
ಸಲಫಿ ಮೂವ್‍ಮೆಂಟಿನ ಉಪಾಧ್ಯಕ್ಷ ಇಸ್ಮಾಯಿಲ್ ಶಾಫಿ ಪ್ರದರ್ಶನದ ಉದ್ಘಾಟನೆ ನೆರವೇರಿಸಲಿದ್ದಾರೆ.
ಕಾರ್ಪರೇಟರ್‍ಗಳಾದ ವಿಜಯ ಕುಮಾರ್ ಶೆಟ್ಟಿ, ಪ್ರವೀಣ್ ಚಂದ್ರ ಆಳ್ವ ನಾಗೂರಿ, ವ್ಯ.ಸೇ.ಸ.ಸಂಘದ ಉಪಾಧ್ಯಕ್ಷ ಬಾಲಾಕೃಷ್ಣ ಶೆಟ್ಟಿ, ಜಲ್ಲಿಗುಡ್ಡೆ ಎಕ್ಸ್‍ಪೋ ಕ್ಲಬ್‍ನ ಅಧ್ಯಕ್ಷ ವಸಂತರಾವ್, ದ.ಕ. ಜಿಲ್ಲಾ ಆರೋಗ್ಯ ಭಾರತಿಯ ಡಾ.ಐ.ಬಿ. ಪಳ್ಳಾದೆ, ಎಕ್ಸ್‍ಪೋ ಕ್ಲಬ್ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಬಿಂದು ನಾಯರ್, ಮಾಜಿ ಸಿಂಡಿಕೇಟ್ ಬ್ಯಾಂಕ್ ಮೆನೇಜರ್ ಬಿ.ಪ್ರಕಾಶ್ ಪೈ, ತೊಕ್ಕೋಟು ಭಗತ್ ಸಿಂಗ್ ಸೇವಾ ಪ್ರತಿಸ್ಠಾನದ ಕಾರ್ಯದರ್ಶಿ ಮೋಹನ್ ಪೂಜಾರಿ ಮತ್ತಿತರ ಪ್ರಮುಖರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆಂದು ಸಂಘಟಕರು ತಿಳಿಸಿದ್ದಾರೆ .