×
Ad

ಕುದ್ರೋಳಿ ಇಸ್ಲಾಮಿಕ್ ದಅ್ವಾ ಸೆಂಟರ್ ಅಧ್ಯಕ್ಷರಾಗಿ ಅಶ್ರಫ್ ಕಿನಾರ ಆಯ್ಕೆ

Update: 2016-12-23 23:39 IST

ಕುದ್ರೋಳಿ, ಡಿ.23 : ಮಂಗಳೂರಿನ ಕುದ್ರೋಳಿಯಲ್ಲಿ ಸಾಮಾಜಿಕವಾಗಿ, ಧಾರ್ಮಿಕವಾಗಿ, ಕಾರ್ಯಾಚರಿಸಲು ಯುವಕರನ್ನು ಒಟ್ಟುಗೂಡಿಸಿ, ಕೆಡುಕಿನ ಕಾರ್ಯ ಚಟುವಟಿಕೆಗಳಿಂದ ಯುವ ಸಮಾಜವನ್ನು ತಡೆಯುವ ಪ್ರಯತ್ನವನ್ನು ಮಾಡಲು ಕುದ್ರೋಳಿ ಇಸ್ಲಾಮಿಕ್ ದಅ್ವಾ ಸೆಂಟರ್ ಎಂಬ ಸಂಘಟನೆಯು ಅಸ್ತಿತ್ವಕ್ಕೆ ಬಂದಿದ್ದು, ಇದರ ಅಧ್ಯಕ್ಷರಾಗಿ ಸಾಮಾಜಿಕ ಮುಂದಾಳು ಹಲವು ಸಂಘ ಸಂಸ್ಥೆಗಳು ನಾಯಕರೂ ಆದ ಅಶ್ರಫ್ ಕಿನಾರರನ್ನು ಆಯ್ಕೆ ಮಾಡಲಾಗಿದೆ. ಪ್ರ. ಕಾರ್ಯದರ್ಶಿಯಾಗಿ ಮುಜೀಬ್ ರಹ್‌ಮಾನ್,
ಉಪಾಧ್ಯಕ್ಷರಾಗಿ  ಅನ್ಸರ್ ಕಂಡತ್‌ಪಳ್ಳಿ ಹಾಗೂ ಇಸ್ಮಾಹಿಲ್ ಕುದ್ರೋಳಿ, ಕಾರ್ಯದರ್ಶಿಗಳಾಗಿ ದಾವೂದ್ ಶಮೀರ್ ಹಾಗೂ ಜಾವೆದ್ ಕಂಡತ್‌ಪಳ್ಳಿ, ಕೋಶಾಧಿಕಾರಿಯಾಗಿ ಅಹ್ಮದ್ ಶಾಲಿಹ್ ಮೊಹ್ದಿನ್ ಪಳ್ಳಿ, ಸದಸ್ಯರುಗಳಾಗಿ ಅಬ್ದುಲ್ ಲತೀಫ್, ಕೆ.ಎಮ್. ಅಫ್‌ಲಲ್, ಅಸ್ಪಾಕ್, ಅನ್ಸಾಫ್, ಸಜ್ಜದ್, ಇರ್ಷಾದ್, ಆದಿಲ್, ಉಮರ್ ಸುಹೈಲ್, ಮೊಹಮ್ಮದ್ ಸಾಹಿಲ್, ಶಾಹಿದ್ ಅಪ್ರಿದ್, ರಾಹಿಷ್, ಮುಪೀದ್, ಸಾಹಿಲ್ ಜಿ., ಅಸ್ಪಾಕ್ ಇವರನ್ನು ಆಯ್ಕೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News