ಕುವೆಂಪು ಬಂಟಮಲೆ ಪ್ರಶಸ್ತಿಗೆ ಎ.ಕೆ.ಸುಬ್ಬಯ್ಯ ಆಯ್ಕೆ
ಸುಳ್ಯ , ಡಿ.23 : ಹಿರಿಯ ರಾಜಕಾರಣಿ ಎ.ಕೆ.ಸುಬ್ಬಯ್ಯ ಅವರನ್ನು ಕುವೆಂಪು ಬಂಟಮಲೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಡಿ. 29ರಂದು ಗುತ್ತಿಗಾರು ಬಳಿಯ ಕಾಡಿನ ಶಾಲೆಯಲ್ಲಿ ನಡೆಯುವ ಕುವೆಂಪು ಜನ್ಮ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಬಂಟಮಲೆ ಅಕಾಡೆಮಿ ಅಧ್ಯಕ್ಷ ಎ.ಕೆ.ಹಿಮಕರ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಡುಮಾಮಿಡಿ ಮಠದ ಶ್ರೀವೀರಭದ್ರ ಚೆನ್ನಮಲ್ಲ ಸ್ವಾಮೀಜಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಾಹಿತಿ ಡಾ.ಕಾಳೇಗೌಡ ನಾಗವಾರ ಅಭಿನಂದನಾ ಭಾಷಣ ಮಾಡಲಿದ್ದಾರೆ. ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯಪ್ರಭ ಚಿಲ್ತಡ್ಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಭರತ್ ಮುಂಡೋಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಶಿಕ್ಷಣ ತಜ್ಞ ಡಾ.ಎನ್.ಸುಕುಮಾರ ಗೌಡ, ಕೊಡಗು ಜಿಲ್ಲಾ ಪಂಚಾಯತ್ ಸದಸ್ಯೆ ಕೆ.ಪಿ.ಚಂದ್ರಕಲಾ, ಮಡಿಕೇರಿ ಸಿಎಂಸಿಯ ಮಾಜಿ ಅಧ್ಯಕ್ಷ ನಂದಕುಮಾರ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಡಿ. 24ರಂದು ಕಲಾವಿದ ಜಾನ್‌ದೇವರಾಜ್ ಅವರಿಂದ ಕಾಷ್ಟಶಿಲ್ಪ ಕಲಾಶಿಬಿರ, ಅಲ್ಲದೆ ಆಹಾರ ಪರಂಪರೆ ಮತ್ತು ಪಾರಂಪರಿಕ ಔಷಧೀಯ ವಿಚಾರಗಳ ಕುರಿತು ವಿಚಾರ ಸಂಕಿರಣ ನಡೆಯಲಿದೆ. 25ರಂದು ಕ್ರಿಸ್‌ಮಸ್ ಅಂಗವಾಗಿ ಗುಲಾಮಗಿರಿಯಿಂದ ಸ್ವಾತಂತ್ರ್ಯದೆಡೆಗೆ ವಿಚಾರಗೋಷ್ಠಿ, 25ರಂದು ಸಮಾಜ ಪರಿವರ್ತಕ ಡಾ.ಕುರುಂಜಿ ವೆಂಕಟ್ರಮಣ ಗೌಡದ ಜನ್ಮ ದಿನಾಚರಣೆ, 27ರಂದು ಮೀನು ಹಾಗೂ ಇರುವಗಳ ಕುರಿತು ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದವರು ಹೇಳಿದರು.
ಆಯೋಜನಾ ಸಮಿತಿ ಸದಸ್ಯರಾದ ಕೆ.ಆರ್.ವಿದ್ಯಾಧರ, ಮದುವೆಗದ್ದೆ ಬೋಜಪ್ಪ ಗೌಡ, ಸತ್ಯಪ್ರಕಾಶ್ ದೇರಪ್ಪಜ್ಜನಮನೆ, ನಂದರಾಜ್ ಸಂಕೇಶ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.