×
Ad

ಟರ್ಕಿ ಪಡೆಗಳು ನಡೆಸಿದ ದಾಳಿಯಲ್ಲಿ 88 ನಾಗರಿಕರು ಹತ

Update: 2016-12-23 23:58 IST

ಬೆರೂತ್, ಡಿ. 23: ಉತ್ತರ ಸಿರಿಯದಲ್ಲಿರುವ ಐಸಿಸ್ ಭಯೋತ್ಪಾದಕ ಗುಂಪಿನ ನೆಲೆಯೊಂದರ ಮೇಲೆ ಟರ್ಕಿ ನಡೆಸಿದ ವಾಯು ದಾಳಿಗಳಲ್ಲಿ 24 ಗಂಟೆಗಳಲ್ಲಿ ಕನಿಷ್ಠ 88 ನಾಗರಿಕರು ಮೃತಪಟ್ಟಿದ್ದಾರೆ ಎಂದು ಸಿರಿಯ ಮಾನವ ಹಕ್ಕುಗಳ ವೀಕ್ಷಣಾಲಯ ಹೇಳಿದೆ.

ಗುರುವಾರ ಅಲ್-ಬಬ್‌ನಲ್ಲಿ ಸರಣಿ ದಾಳಿಗಳನ್ನು ನಡೆಸಲಾಯಿತು ಹಾಗೂ ಈ ದಾಳಿಗಳಲ್ಲಿ 21 ಮಕ್ಕಳು ಸೇರಿದಂತೆ 72 ನಾಗರಿಕರು ಪ್ರಾಣ ಕಳೆದುಕೊಂಡರು ಎಂದು ವೀಕ್ಷಣಾಲಯ ತಿಳಿಸಿದೆ. ಬಾಂಬ್ ದಾಳಿಯು ಶುಕ್ರವಾರವೂ ಮುಂದುವರಿದಿದ್ದು ಇನ್ನೂ 16 ಮಂದಿ ನಾಗರಿಕರು ಮೃತಪಟ್ಟಿದ್ದಾರೆ ಹಾಗೂ ಅವರ ಪೈಕಿ ಮೂವರು ಮಕ್ಕಳು. ಇದು ಆಗಸ್ಟ್‌ನಲ್ಲಿ ಟರ್ಕಿ ಪಡೆಗಳು ಸಿರಿಯದಲ್ಲಿ ಮಧ್ಯ ಪ್ರವೇಶಿಸಲು ಆರಂಭಿಸಿದ ಬಳಿಕ, ಅವುಗಳು ನಡೆಸಿದ ಅತ್ಯಂತ ಭೀಕರ ದಾಳಿಯಾಗಿದೆ ಎಂದು ವೀಕ್ಷಣಾಲಯದ ಮುಖ್ಯಸ್ಥ ರಮಿ ಅಬ್ದುಲ್ ರಹಮಾನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News