ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಲಾಂಛನ ಆಹ್ವಾನ
Update: 2016-12-23 23:58 IST
ಮಂಗಳೂರು, ಡಿ.23: ಉಜಿರೆಯಲ್ಲಿ ಜನವರಿ ಕೊನೆಯ ವಾರ 3 ದಿನಗಳ ಕಾಲ ನಡೆಯುವ 21ನೆ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಲಾವಿದರಿಂದ ಸೂಕ್ತ ಲಾಂಛನವನ್ನು ಆಹ್ವಾನಿಸಲಾಗಿದೆ.
ಕನ್ನಡ ನಾಡು ನುಡಿಯ ಸಾಂಸ್ಕೃತಿಕ ಉತ್ಸವಕ್ಕೆ ಸರಿಹೊಂದುವ ಲಾಂಛನವನ್ನು ರಚಿಸಿ, ಸ್ವವಿಳಾಸ, ದೂರವಾಣಿ ಸಂಖ್ಯೆ ಸಹಿತ ಜನವರಿ 2ರೊಳಗಾಗಿ ಅಧ್ಯಕ್ಷರು, ದ.ಕ. ಜಿಲ್ಲಾ ಕಸಾಪ ಕಲ್ಕೂರ ಪ್ರತಿಷ್ಠಾನ, ಶ್ರೀಕೃಷ್ಣ ಸಂಕೀರ್ಣ, ಮಹಾತ್ಮಾ ಗಾಂಧಿ ರಸ್ತೆ, ಕೊಡಿಯಾಲ್‌ಬೈಲ್, ಮಂಗಳೂರು ಇಲ್ಲಿಗೆ ಕಳುಹಿಸಿಕೊಡುವಂತೆ ಕೋರಲಾ ಗಿದೆ. ಆಯ್ಕೆಗೊಂಡ ಲಾಂಛನ ರಚನ ಕಾರರನ್ನು ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಪುರಸ್ಕರಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.