×
Ad

ಯುನಿವೆಫ್‌ನಿಂದ ದೇರಳಕಟ್ಟೆಯಲ್ಲಿ ಪ್ರವಾದಿ ಅಭಿಯಾನ

Update: 2016-12-24 16:34 IST

ಮಂಗಳೂರು, ಡಿ.24: ಭಾರತದಲ್ಲಿ ನಾಗರಿಕ ಕಾನೂನು ಹಾಗೂ ಸಾಮಾಜಿಕ ನ್ಯಾಯ ಮತ್ತು ಪ್ರವಾದಿ ಮುಹಮ್ಮದ್(ಸ.) ಎಂಬ ಕೇಂದ್ರೀಯ ವಿಷಯದಲ್ಲಿ ಯುನಿವೆಫ್ ಕರ್ನಾಟಕ ದ.ಕ. ಘಟಕ ಹಮ್ಮಿಕೊಂಡಿರುವ ‘ಅರಿಯಿರಿ ಮನುಕುಲದ ಪ್ರವಾದಿಯನ್ನು’ ಅಭಿಯಾನದ ದಶಮಾನೋತ್ಸವದ ಪ್ರಥಮ ಸಾರ್ವಜನಿಕ ಕಾರ್ಯಕ್ರಮವು ದೇರಳಕಟ್ಟೆಯ ಸಿಟಿ ಗ್ರೌಂಡ್‌ನಲ್ಲಿ ಜರಗಿತು.
 ‘ಶರೀಅತ್ ಅಲ್ಲಾಹನ ಕಾನೂನು’ ಎಂಬ ವಿಷಯದಲ್ಲಿ ಪ್ರಮುಖ ಭಾಷಣ ಮಾಡಿದ ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ, ಅಲ್ಲಾಹುವಿನ ವಾಣಿ ಮತ್ತು ಆತನ ಪ್ರವಾದಿ (ಸ.) ಯ ಜೀವನವನ್ನು ಆದರ್ಶವಾಗಿಟ್ಟುಕೊಂಡು ಬದುಕುವ ಪ್ರತಿಯೊಬ್ಬ ಮುಸ್ಲಿಮನೂ ಶರೀಅತ್ ನೀತಿ-ನಿಬಂಧನೆಗಳನ್ನು ಪಾಲಿಸುವವನಾಗಿರಬೇಕು. ಶರೀಅತ್ ಸಂರಕ್ಷಣೆ ಕೇವಲ ಹೋರಾಟದಿಂದಲ್ಲ, ಅದರ ಅನುಸರಣೆಯಿಂದಲೂ ಆಗಬೇಕು ಎಂದರು.
ಅಭಿಯಾನದ ಸಂಚಾಲಕ ಸಲೀಮ್ ಮಲಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಮುಹಮ್ಮದ್ ನವಾಝ್ ಉಳ್ಳಾಲ್ ಕಿರಾಅತ್ ಪಠಿಸಿದರು. ಸಬೀಲ್ ಅಹ್ಮದ್ ಉಳ್ಳಾಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ರಾಜ್ಯ ಸಲಹಾ ಸಮಿತಿಯ ಸದಸ್ಯ ಅಬ್ದುಲ್ಲಾ ಪಾರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News