ಕಾಟಿಪಳ್ಳ : ಮಿಸ್ಬಾ ವಿಮೆನ್ಸ್ ಕಾಲೇಜ್‌ನಲ್ಲಿ ಮಿಲಾದ್ ಫೆಸ್ಟ್
ಸುರತ್ಕಲ್ , ಡಿ.24 : ಮಹಿಳಾ ಸಬಲೀಕರಣಕ್ಕಾಗಿ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವುದು ಅಗತ್ಯ ಎಂದು ಅಲ್ ಮುಝೈನ್ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಝಕರಿಯ್ಯೆ ಜೋಕಟ್ಟೆಯವರು ಹೇಳಿದರು.
ಅವರು ಕಾಟಿಪಳ್ಳ ಮಿಸ್ಬಾ ವಿಮೆನ್ಸ್ ಕಾಲೇಜ್‌ನ ವತಿಯಿಂದ ಇಂದು ನಡೆದ ಈದ್ ಮಿಲಾದ್ ಫೆಸ್ಟ್ 2016 ಉದ್ಘಾಟಿಸಿ ಮಾತನಾಡುತ್ತಿದ್ದರು.
ಹೆಣ್ಣು ಒಬ್ಬಳು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನಾಣ್ಣುಡಿಯನ್ನು ಉಲ್ಲೇಖಿಸಿ ಇಸ್ಲಾಂ ಧರ್ಮದಲ್ಲಿ ಲಿಂಗ ಸಮಾನತೆ, ಭಾವೈಕ್ಯತೆ, ಸೌರ್ಹದತೆಗಾಗಿ ವಿಶೇಷ ಒತ್ತು ಕೊಡಲಾಗಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮುಹಮ್ಮದ್ ಅಶ್ರಫ್ ಅಲ್ ಜುಬೈಲ್ ಸೌದಿ ಅರೇಬಿಯಾ ಹಾಗೂ ಅಬ್ದುಲ್ ಸಲಾಮ್‌ರವರು ಭಾಗವಹಿಸಿದರು.
ಮಿಸ್ಬಾ ಮಹಿಳಾ ಕಾಲೇಜಿನ ಅಧ್ಯಕ್ಷರಾದ ಅಲ್ ಹಾಜಿ ಬಿ.ಎಂ.ಮಮ್ತಾಜ್ ಅಲಿ ಯವರು ಸ್ವಾಗತಿಸಿದರು.
ಸಂಚಾಲಕರಾದ ಬಿ.ಎ.ನಝೀರ್, ಟ್ರಸ್ಟಿಗಳಾದ ಅಬ್ದುಲ್ ಹಕೀಮ್ ಫಾಲ್ಕನ್ , ಟಿ.ಹೆಚ್.ಮೆಹಬೂಬ್ ಅಲ್ ಜುಬೈಲ್ , ಮೊಹಮ್ಮದ್ ಮುಬೀನ್ ಅಲ್ ಜುಬೈಲ್ ನಝೀರ್ ಕತ್ತಾರ್, ಉಪನ್ಯಾಸಕರಾದ ಅಶ್ರಫ್ ಸಖಾಫಿ, ಉಮರ್ ಫಾರೂಕ್ ಸಖಾಫಿ, ಶಾರದ, ಸವಿತಾ, ನಾಗರತ್ನ, ಮಸೂದಾ, ಬುಶ್ರಾ, ಅಶೂರಾ ಉಪಸ್ಥಿತರಿದ್ದರು.
ಉಪನ್ಯಾಸಕಿ ರಂಜಿತ ಸ್ವಾಗತಿಸಿ ಮತ್ತು ಉಪನ್ಯಾಸಕರಾದ ಸನಾ ಹುಸೈನ್ ನಿರೂಪಿಸಿದರು.