ಬೈಲೂರಿನ ಮಡಿಕೇರಿಯಲ್ಲಿ ರಕ್ತದಾನ ಶಿಬಿರ
ಭಟ್ಕಳ , ಡಿ.24 : ಉತ್ತರ ಕನ್ನಡ ಬ್ಲಡ್ ಬ್ಯಾಂಕ್, ಕದಂಬ ಯುವಕ ಸಂಘ (ರಿ) ಮಡಿಕೇರಿ ಬೈಲೂರು, ಲಯನ್ಸ್ ಕ್ಲಬ್ ಮುರ್ಡೇಶ್ವರ ಇವರ ಸಹಯೋಗದೊಂದಿಗೆ ರಕ್ತದಾನ ಶಿಬಿರವು ಬೈಲೂರಿನ ಮಡಿಕೇರಿಯಲ್ಲಿ ಯಶಸ್ವಿಯಾಗಿ ನೆರವೇರಿತು.
ಬೈಲೂರು ಗ್ರಾಮ ಪಂಚಾಯತ್ ಅಧ್ಯಕ್ಷ ಮಂಜುನಾಥ ಮಂಜಪ್ಪ ನಾಯ್ಕ ಅಧ್ಯಕ್ಷತೆ ವಹಿಸಿದ್ದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ವಾದಿರಾಜ ಭಟ್ಟ ಕಾರ್ಯಕ್ರಮದ ಮಹತ್ವವನ್ನು ವಿವರಿಸಿದರು.
ಕಾಮತ್ ಬ್ಲಡ್ ಬ್ಯಾಂಕ್‌ನ ಅಧ್ಯಕ್ಷರಾದ ಡಾ.ಎಮ್.ಕೆ ನಾಯ್ಕರವರು ರಕ್ತದಾನ ಶಿಬಿರದ ರೂಪುರೇಶೆಗಳ ಕುರಿತಾದ ಮಹತ್ವದ ವಿಷಯಗಳನ್ನು ಪ್ರಸ್ತುತಪಡಿಸಿದರು.
ಲಯನ್ಸ್ ಸದಸ್ಯರಾದ ಡಾ.ಸುನೀಲ್ ಜತ್ತನ್ ರಕ್ತದಾನ ಇಂದಿನ ದಿನಗಳಲ್ಲಿ ಎಷ್ಟು ಅವಶ್ಯಕತೆಯಿದೆ, ರಕ್ತದಾನಿಗೆ ಇದರಿಂದಾಗುವ ಅನುಕೂಲಗಳೇನು ಎಂಬುದರ ಬಗ್ಗೆ ಉಪಾನ್ಯಾಸವನ್ನು ನೀಡಿದರು.
ಕದಂಬ ಯುವಕ ಸಂಘದ ಅಧ್ಯಕ್ಷ ಮಂಜುನಾಥ ಕೃಷ್ಣ ನಾಯ್ಕ, ಲಯನ್ಸ್ ಕ್ಲಬ್ ಮುರ್ಡೇಶ್ವರದ ಸದಸ್ಯರಾದ ಎ.ಎನ್.ಶೆಟ್ಟಿ, ಮೋಹನ್ ನಾಯ್ಕ, ಸುಬ್ರಾಯ ನಾಯ್ಕ, ಕೃಷ್ಣರಾಮ ಶೆಟ್ಟಿ ವೇದಿಕೆಯಲ್ಲಿದ್ದರು.
ಈ ಸಂದರ್ಭದಲ್ಲಿ ಮಡಿಕೇರಿ ಕದಂಬ ಯುವಕ ಮಂಡಳದ ಸದಸ್ಯರು, ಲಯನ್ಸ್ ಕ್ಲಬ್ ಮುರ್ಡೇಶ್ವರದ ಸದಸ್ಯರು, ನಾಗರಿಕರು ರಕ್ತದಾನ ಮಾಡಿ ಮಹತ್ಕಾರ್ಯದಲ್ಲಿ ಪಾಲ್ಗೊಂಡರು. ಸತೀಶ ನಾಯ್ಕ ಕಾರ್ಯಕ್ರಮವನ್ನು ನಿರೂಪಿಸಿದರು.