ಓಮ್ನಿ ಕಾರು ಢಿಕ್ಕಿ : ಬೈಕ್ ಸವಾರ ಸಾವು
Update: 2016-12-24 21:12 IST
ಬೆಳ್ತಂಗಡಿ , ಡಿ. 24: ಓಮ್ನಿ ಕಾರು ಢಿಕ್ಕಿಯಾಗಿ ಬೈಕ್ ಸವಾರ ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಳ್ತಂಗಡಿ ಕಸಬಾದ ರೆಂಕೆದ ಗುತ್ತು ಎಂಬಲ್ಲಿ ನಡೆದಿದೆ.
ಬೈಕ್ ಸವಾರನನ್ನು ಕೊಯ್ಯೂರು ಗ್ರಾಮದ ದೇವರಾಜ್ ಎಂಬುವರ ಪುತ್ರ ಚಂದ್ರಶೇಖರ (30) ಎಂದು ಗುರುತಿಸಲಾಗಿದೆ.
ಇವರು ಬೈಕ್‌ನಲ್ಲಿ ಹೋಗುತ್ತಿದ್ದಾಗ ಹಿಂಬದಿಯಿಂದ ಕಾರು ಢಿಕ್ಕಿ ಹೊಡೆದಿದೆ. ಇದರಿಂದ ಅವರು ರಸ್ತೆಗೆ ಅಪ್ಪಳಿಸಿ ತೀವ್ರ ಜಖಂಗೊಂಡು ಸ್ಥಳದಲ್ಲೇ ಮೃತಪಟ್ಟರು.
ಇವರು ಬೆಳ್ತಂಗಡಿಯ ಕೋಟಿ ಚೆನ್ನಯ ಎಂಬ ಶಾಮಿಯಾನ ವ್ಯವಹಾರದಲ್ಲಿ ಕೆಲಸ ಮಾಡುತ್ತಿದ್ದರು.
ಮೃತರಿಗೆ ಪತ್ನಿ, ಪುತ್ರ ಇದ್ದಾರೆ.
ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.