ಎಸ್ಸೆಸ್ಸೆಫ್ ಸೆಕ್ಟರ್ ಪದಾಧಿಕಾರಿಗಳ ಆಯ್ಕೆ
ಉಡುಪಿ, ಡಿ.24: ಎಸ್ಸೆಸ್ಸೆಫ್ ಬ್ರಹ್ಮಾವರ ಸೆಕ್ಟರ್ ಮಹಾಸಭೆಯು ಸೆಕ್ಟರ್ ಅಧ್ಯಕ್ಷ ಅಬ್ದುರ್ರಹ್ಮಾನ್ ಸಅದಿ ಭದ್ರಗಿರಿ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ರಂಗನಕೆರೆ ನೂರುಲ್ ಹುದಾ ಮದರಸದಲ್ಲಿ ಜರಗಿತು.
ನೂತನ ಗೌರವಾಧ್ಯಕ್ಷರಾಗಿ ಬಿ.ಎ.ಮುಹಮ್ಮದಾಲಿ ಸಅದಿ ರಂಗನಕೆರೆ, ಸುಬುಹಾನ್ ಹೊನ್ನಾಳ, ರಝಾಕ್ ಮಾಸ್ಟರ್ ಸಾಸ್ತಾನ, ಅಧ್ಯಕ್ಷರಾಗಿ ಅಬ್ದುರ್ರಹ್ಮಾನ್ ಸಅದಿ ಭದ್ರಗಿರಿ, ಪ್ರಧಾನ ಕಾರ್ಯದರ್ಶಿಯಾಗಿ ಮುತ್ತಲಿಬ್ ರಂಗನಕೆರೆ, ಕೋಶಾಧಿಕಾರಿಯಾಗಿ ಹಬೀಬ್ ಸಾಸ್ತಾನ, ಉಪಾಧ್ಯಕ್ಷರಾಗಿ ಶಹನವಾಝ್ ಹೊನ್ನಾಳ, ಸೈಯ್ಯದ್ ಅನೀಶ್, ಜೊತೆ ಕಾರ್ಯದರ್ಶಿಯಾಗಿ ಶಮೀರ್ ಗಾಂಧಿನಗರ, ನಝೀರ್ ಸಾಸ್ತಾನ, ಕ್ಯಾಂಪಸ್ ಕಾರ್ಯದರ್ಶಿಯಾಗಿ ನಯಾಝ್ ಭದ್ರಗಿರಿ, ಡಿವಿಷನ್ ಕೌನ್ಸಿಲರ್‌ಗಳಾಗಿ ಅಬ್ದುರ್ರಹ್ಮಾನ್ ಸಅದಿ ಭದ್ರಗಿರಿ, ನಾಸೀರ್ ಭದ್ರಗಿರಿ, ಶಂಶುದ್ದೀನ್ ರಂಗನಕೆರೆ, ಇಬ್ರಾಹಿಂ ರಂಗನಕೆರೆ, ನಝೀರ್ ಸಾಸ್ತಾನ, ಸೈಯದ್ ಅನೀಶ್, ಶಹನವಾಝ್ ಹೊನ್ನಾಳ, ಹಬೀಬ್ ಸಾಸ್ತಾನ, ಸಿರಾಜ್ ಗಾಂಧಿನಗರ, ಸುಲೇಮಾನ್ ರಂಗನಕೆರೆ ಅವರನ್ನು ಆಯ್ಕೆ ಮಾಡಲಾಯಿತು.
ಚುನಾವಣಾಧಿಕಾರಿಯಾಗಿ ರಝಾಕ್ ಉಸ್ತಾದ್ ಸಹಕರಿಸಿದರು.
ಸಭೆ ಯನ್ನು ಉಡುಪಿ ಡಿವಿಷನ್ ಅಧ್ಯಕ್ಷ ಬಿ.ಎ.ಮುಹಮ್ಮದಾಲಿ ಸಅದಿ ಉದ್ಘಾಟಿ ಸಿದರು.
ಇಬ್ರಾಹಿಂ ಸ್ವಾಗತಿಸಿದರು. ಮುತ್ತಲಿಬ್ ರಂಗನೆಕೆರೆ ವಂದಿಸಿದರು.