ಯುವ ಸಂಘಟನೆಗೆ ಎನ್‌ಎಸ್‌ಎಸ್ ಮಾದರಿ: ಜೈನ್
ಮುಲ್ಕಿ, ಡಿ. 24: ಎನ್‌ಎಸ್‌ಎಸ್ ಯುವ ಪೀಳಿಗೆ ಮಾರ್ಗದರ್ಶನ ನೀಡಿ ಸದೃಢ ಭಾರತ ನಿರ್ಮಾಣದಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ ಎಂದು ಮುಲ್ಕಿ ಮೂಡಬಿದಿರೆ ಶಾಸಕ ಅಭಯಚಂದ್ರ ಜೈನ್ ಹೇಳಿದರು.
ಅವರು ಪದವಿ ಪುರ್ವ ಶಿಕ್ಷಣ ಇಲಾಖೆ ಬೆಂಗಳೂರು ರಾಷ್ಟ್ರೀಯ ಸೇವಾ ಯೋಜನೆ ಮತ್ತು ಸರಕಾರಿ ಪದವಿ ಪೂರ್ವ ಕಾಲೇಜು ಮುಲ್ಕಿ ಇವುಗಳ ಸಹಭಾಗಿತ್ವದಲ್ಲಿ ‘ವಿಜ್ಞಾನ ಮತ್ತು ವೈಜ್ಞಾನಿಕ ಮನೋಭಾವನೆಗಾಗಿ ಯುವಕರು’ ಎಂಬ ಬರಹದೊಂದಿಗೆ ಅತಿಕಾರಿಬೆಟ್ಟು ಗ್ರಾಮದ ನಡಿಬೆಟ್ಟು ಸಭಾಭವನದಲ್ಲಿ ವಾರ್ಷಿಕ ವಿಶೇಷ ಶಿಬಿರ-2016-17ನ್ನು ಉದ್ಘಾಟಿಸಿ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ನಡಿಬೆಟ್ಟು ಧೂಮಾವತಿ ದೈವಸ್ಥಾನದ ಆಡಳಿತ ಮೊಕ್ತೇಸರ ದೆಪ್ಪುಣಿಗುತ್ತು ಜಯರಾಮ ಶೆಟ್ಟಿ ವಹಿಸಿದ್ದರು.
ವೇದಿಕೆಯಲ್ಲಿ ವೇದಮೂರ್ತಿ ವಾಧಿರಾಜ ಉಪಾದ್ಯಾಯ ಕೊಲೆಕಾಡಿ,ಅತಿಕಾರಿಬೆಟ್ಟು ಗ್ರಾ.ಪಂ ಉಪಾಧ್ಯಕ್ಷ ಕಿಶೋರ್ ಶೆಟ್ಟಿ ದೆಪ್ಪುಣಿ ಗುತ್ತು, ಶಾಲಾಭಿವೃದ್ಧಿ ಸಮಿತಿಯ ಡಾ.ಅಚ್ಯುತ ಕುಡ್ವ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ಸಹಾಯಕ ಆಯುಕ್ತ ಸರ್ವೋತ್ತಮ ಅಂಚನ್, ಉದ್ಯಮಿ ಧನಂಜಯ ಕೋಟ್ಯಾನ್ ಮಟ್ಟು, ರಾಮದಾಸ್ ಶೆಟ್ಟಿ ಪುತ್ತೂರು ಬಾಳಿಕೆ ಮನೆ, ಅತಿಕಾರಿಬೆಟ್ಟು ಗ್ರಾ.ಪಂ. ಸದಸ್ಯ ಮನೋಹರ ಕೋಟ್ಯಾನ್, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವಿಷ್ಣುಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.