ಮುಲ್ಕಿ : ಸಿಎಸ್‌ಐ ಶಿಕ್ಷಣ ಸಂಸ್ಥೆಯಲ್ಲಿ ಕ್ರಿಸ್ಮಸ್ ಆಚರಣೆ
ಮುಲ್ಕಿ, ಡಿ.24: ಈಗಿನ ಕಾಲಘಟ್ಟದಲ್ಲಿ ಸಮಾನತೆ, ಸಹೋದರತೆ ಪ್ರಸ್ತುತ ಕಾಲದ ಅಗತ್ಯವಾಗಿದ್ದು, ನಾವೆಲ್ಲರೂ ಅನುಸರಿಸಬೇಕಾಗಿದೆ. ಇತರರನ್ನು ಗೌರವಿಸುವ ಗುಣ ನಮ್ಮಲ್ಲಿ ಬೆಳೆಸಬೇಕಾಗಿದೆ ಎಂದು ಕಾರ್ನಾಡು ಅಮಲೋದ್ಭವ ಚರ್ಚ್‌ನ ಧರ್ಮಗುರು ರೆ. ಪಾ. ಪ್ರಾನ್ಸಿಸ್ ಝೇವಿಯರ್ ಗೋಮ್ಸ್ ಹೇಳಿದರು.
ಅವರು ಕಾರ್ನಾಡು ಸಿಎಸ್‌ಐ ಶಿಕ್ಷಣ ಸಂಸ್ಥೆಯಲ್ಲಿ ಜರಗಿದ ಕ್ರಿಸ್ಮಸ್ ಆಚರಣೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮವನ್ನು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ವಸಂತ ಬೆರ್ನಾಡ್ ಉದ್ಘಾಟಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸಭಾಪಾಲನ ಸಮಿತಿಯ ಅಧ್ಯಕ್ಷ ರೆ. ಎಡ್ವರ್ಡ್ ಕರ್ಕಡ ವಹಿಸಿದ್ದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮುಂಬಯಿಯ ಸಂಜೀತ್ ಶೆಟ್ಟಿ, ಬಹರೈನ್‌ನ ಅಮೇರಿಕನ್ ನೇವಲ್ ಬೇಸ್‌ನ ಗೋಡ್‌ಪ್ರೆಹೆನ್ರಿ ಮತ್ತು ಅವರ ಧರ್ಮಪತ್ನಿ ರಾಣಿ ಹೆನ್ರಿ ಮುಖ್ಯ ಅತಿಥಿಗಳಾಗಿದ್ದರು. ಶಾಲಾ ಸಂಚಾಲಕ ಫ್ರೊ.ಸ್ಯಾಮ್ ಮಾಬೆನ್, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಹರ್ಷರಾಜ್ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ರಂಜನ್ ಜತ್ತನ್ನ, ಮನೋರಮ ಹೆನ್ರಿ, ಯುಬಿಯಂಸಿ ಮತ್ತು ಸಿಯಸ್‌ಐ ಶಾಲೆಯ ಮುಖ್ಯ ಶಿಕ್ಷಕಿಯರಾದ ಗ್ಲಾಡಿಸ್ ಸುಕುಮಾರಿ, ಝೀಠ ಮೆಂಡೋನ್ಸಾ ಉಪಸ್ಥಿತರಿದ್ದರು.