ಉಪ್ಪಿನಂಗಡಿ ಸೆಕ್ಟರ್ ನೂತನ ಪದಾಧಿಕಾರಿಗಳ ಆಯ್ಕೆ
Update: 2016-12-25 09:43 IST
ಮಠ,ಡಿ. 22: ಎಸ್ಸೆಸೆಫ್ ಉಪ್ಪಿನಂಗಡಿ ಸೆಕ್ಟರ್ ಇದರ ಅಂಗ ಸಂಸ್ಥೆಯಾದ ಎಸ್ಸೆಸೆಫ್ ಮಠ ಯುನಿಟ್ ಇದರ ಮಹಾಸಭೆ ಇಲ್ಲಿನ ನೂರುಲ್ ಉಲಮಾ ಪೌಂಡೇಶನ್ ಮಠದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಎಸ್ಸೆಸೆಫ್ ಉಪ್ಪಿನಂಗಡಿ ಡಿವಿಶನ್ ಅಧ್ಯಕ್ಷ ಎನ್.ಎಂ ಶರೀಫ್ ಸಖಾಫಿ ಅಧ್ಯಕ್ಷತೆ ವಹಿಸಿದ್ದರು.ಇದೇ ಸಂದರ್ಭ ನೂತನ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಸಿರಾಜುದ್ದೀನ್ ಸಖಾಫೀ, ಉಪಾಧ್ಯಕ್ಷರುಗಳಾಗಿ ಉಮರುಲ್ ಫಾರೂಕ್ ಕೆರೆಮೂಲೆ, ರಿಯಾಝ್ ಎಚ್.ಎನ್, ಪ್ರ.ಕಾರ್ಯದರ್ಶಿಯಾಗಿ ಪಯಾಝ್ ಹಿರ್ತಡ್ಕ, ಜೊ.ಕಾರ್ಯದರ್ಶಿಯಾಗಿ ಅಬ್ದುರ್ರಹ್ಮಾನ್ ಕೊಪ್ಪಲ, ಸಕ್ಬೀರ್ ಹಿರ್ತಡ್ಕ, ಕೋಶಾಧಿಕಾರಿಯಾಗಿ ಹನೀಫ್ ಹಿರ್ತಡ್ಕ ಆಯ್ಕೆಗೊಂಡರು.