ಮಂಗಳೂರು ವಿಮಾನ ನಿಲ್ದಾಣದಲ್ಲಿ ಅನುಮಾನಾಸ್ಪದ ವ್ಯಕ್ತಿಯ ಬಂಧನ
Update: 2016-12-25 09:46 IST
ಮಂಗಳೂರು, ಡಿ.25: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅನುಮಾನಾಸ್ಪದ ವ್ಯಕ್ತಿಯೋರ್ವನನ್ನು ಎಮಿಗ್ರೇಶನ್ ಅಧಿಕಾರಿಗಳು ವಶಕ್ಕೆ ಪಡೆದು ಎನ್‌ಐಎ ಪೊಲೀಸ್ ತಂಡಕ್ಕೆ ಹಸ್ತಾಂತರಿಸಿದ ಘಟನೆ ನಡೆದಿದೆ.ಎನ್‌ಐಎ ವಶದಲ್ಲಿರುವ ಆರೋಪಿಯನ್ನು ಮಂಗಳೂರಿನ ಓಲ್ಡ್ ಕೆಂಟ್ ರಸ್ತೆಯ ನಿವಾಸಿ ಮುನಾಫ್ ರಹ್ಮಾನ್ ಎಂದು ಗುರುತಿಸಲಾಗಿದೆ.ಮೂಲತಃ ಕೇರಳದ ನಿವಾಸಿಯಾಗಿರುವ ಮುಸ್ತಫಾ ಡಿಸೆಂಬರ್ 23ರಂದು ಮಂಗಳೂರು ವಿಮಾನ ನಿಲ್ದಾಣದಿಂದ ತೆರಳುತ್ತಿದ್ದ ಸಂದರ್ಭ ವಶಕ್ಕೆ ತೆಗೆದುಕೊಂಡ ಇಮಿಗ್ರೇಶನ್ ಅಧಿಕಾರಿಗಳು ಈತನನ್ನು ಎನ್‌ಐಎ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಎನ್‌ಐಎ ಅಧಿಕಾರಿಗಳು ಮುನಾಫ್ರನ್ನು ವಿಚಾರಣೆಗೊಳಪಡಿಸಿದ್ದಾರೆ ಎಂದು ಹೇಳಲಾಗಿದೆ.