×
Ad

ಮುಸ್ಲಿಂ ವೃದ್ಧರಿಗಾಗಿ ಪುನರ್ವಸತಿ ಕೇಂದ್ರ ಸ್ಥಾಪನೆ

Update: 2016-12-25 10:54 IST

ಮಂಗಳೂರು, ಡಿ.25: ದ.ಕ ಮತ್ತು ಉಡುಪಿ ಜಿಲ್ಲಾ ನಿವೃತ್ತ ಮುಸ್ಲಿಂ ಅಧಿಕಾರಿಗಳ ಸಂಘ ಮಂಗಳೂರು ಇದರ ಆಡಳಿತಕ್ಕೊಳಪಟ್ಟ ಬಂಟ್ವಾಳ ತಾಲೂಕು ಪಾಣೆ ಮಂಗಳೂರು ಆಲಡ್ಕದಲ್ಲಿ ಮುಸ್ಲಿಂ ಸಮುದಾಯದ ಅಶಕ್ತ, ಅನಾಥ, ನಿರ್ಗತಿಕ, ಬಡವರ್ಗದ 50 ವರ್ಷ ದಾಟಿದ ವಯೋ ವೃದ್ಧರ ಪಾಲನೆಗಾಗಿ ದೆಂಜಿಪ್ಪಾಡಿ ಪುನರ್ವಸತಿ ಕೇಂದ್ರ (ಮುಸ್ಲಿಂ ವೃದ್ಧರಿಗಾಗಿ)ವನ್ನು ತೆರೆಯಲು ಉದ್ದೇಶಿಸಲಾಗಿದೆ.

ದೆಂಜಿಪ್ಪಾಟಿ ಕುಂಟುಂಬದ ವಕ್ಛ್ ಸೊತ್ತಾಗಿರುವ ಕಟ್ಟಡ ಹಾಗೂ 20 ಸೆಂಟ್ಸ್ ಸ್ಥಳವನ್ನು ದೆಂಜಿಪ್ಪಾಡಿ ಕುಟುಂಬದ ವಕ್ಛ್ ಆಸ್ತಿಯ ಮುತವಲ್ಲಿ, ಹಾಜಿ ಅಬ್ದುಲ್ ಖಾದರ್ ಅವರು ನಿವೃತ್ತ ಮುಸ್ಲಿಂ ಅಧಿಕಾರಿಗಳ ಸಂಘಕ್ಕೆ ಅಧಿಕೃತ ಕರಾರು ಪತ್ರದೊಂದಿಗೆ ಹಸ್ತಾಂತರಿಸಿದ್ದಾರೆ. ಪುನರ್ವಸತಿ ಕೇಂದ್ರ ಸ್ಥಾಪನೆಗಾಗಿ ಈಗಾಗಲೇ ಸಂಘವು ಕಾರ್ಯಪ್ರವೃತ್ತವಾಗಿದ್ದು, 2017 ರ ಜನವರಿ 30 ರಂದು ಅಧಿಕೃತವಾಗಿ ದೆಂಜಿಪ್ಪಾಡಿ ಪುನರ್ವಸತಿ ಕೇಂದ್ರವು ಉದ್ಘಾಟನೆಗೊಳ್ಳಲಿದೆ.

ಉತ್ತಮವಾದ ಊಟೋಪಚಾರ, ಆರೋಗ್ಯ ತಪಾಸಣೆ ವ್ಯವಸ್ಥೆಯನ್ನು ಉಚಿತವಾಗಿ ಕಲ್ಪಿಸಲಾಗುವುದು. ಆಸಕ್ತ ವೃದ್ಧರು ತಮ್ಮ ಜಮಾಅತ್‌ನ ಅಧ್ಯಕ್ಷರು/ ಕಾರ್ಯದರ್ಶಿಗಳನ್ನು ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಾಯಿಸಬಹುದು. ಸ್ವಯಂ ಸೇವಾ ಸಂಘಟನೆಯ ಮುಖ್ಯಸ್ಥರು, ಜಮಾಅತ್ ಅಧ್ಯಕ್ಷ, ಕಾರ್ಯದರ್ಶಿಗಳು ತಮ್ಮ ಗಮನಕ್ಕೆ ಬರಬಹುದಾದ ಅರ್ಹ ಫಲಾನುಭವಿಗಳನ್ನು ನೋಂದಾಯಿಸಿ ಸಹಕರಿಸಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯ ಮೊ. 7760470344 ಹಾಗೂ ಅಧ್ಯಕ್ಷರ ಮೊಬೈಲ್ ಸಂಖ್ಯೆ 9845249369ಗೆ ಸಂರ್ಕಿಸಬಹುದೆಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎ.ಎಚ್.ತುಂಬೆ ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News