ಮಿತ್ತರಾಜೆ ಎಸ್ಸೆಸ್ಸೆಫ್ ಶಾಖೆಯ ಪದಾಧಿಕಾರಿಗಳ ಆಯ್ಕೆ
ಸಾಲೆತ್ತೂರು, ಡಿ.25: ಸುನ್ನೀ ಸ್ಟೂಡೆoಟ್ ಫೆಡರೇಶನ್ ಮಿತ್ತರಾಜೆ ಶಾಖೆಯ ಮಹಾಸಭೆಯು ಪಂಜರಕೋಡಿ ನೂರುಲ್ ಉಲೂo ಮದ್ರಸದಲ್ಲಿ ಅಬ್ದುಲ್ ಹಮೀದ್ ರವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.
ಅಬೂಬಕರ್ ಮದನಿ ಸಭೆಯನ್ನು ಉದ್ಘಾಟಿಸಿದರು. ಕಾರ್ಯದರ್ಶಿ ಮುಸ್ತಫಾ ಸ್ವಾಗತಿಸಿ ವರದಿ ಮತ್ತು ಲೆಕ್ಕ ಪತ್ರ ಮಂಡಿಸಿದರು. ತದನಂತರ 2016-17 ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷ ರಾಗಿ ಅಬ್ದುಲ್ ಹಮೀದ್ ಕಲ್ಕಟ್ಟ ,ಪ್ರಧಾನ ಕಾರ್ಯದರ್ಶಿಯಾಗಿ ಯಝೀದ್ ಕಲ್ಕಟ್ಟ ಕೋಶಾಧಿಕಾರಿಯಾಗಿ ದಾವೂದ್ ಅಬ್ಬೆಮಾರ್, ಉಪಾಧ್ಯಕ್ಷರಾಗಿ ಹನೀಫ್ ಮಿತ್ತರಾಜೆ,ಹಕೀo ವಗ್ಗ, ಜೊತೆ ಕಾರ್ಯದರ್ಶಿಗಳಾಗಿ ಮುಸ್ತಫ ಮಿತ್ತರಾಜೆ,ನೌಫಲ್ ಜೊತೆ ಕೋಶಾಧಿಕಾರಿಯಾ ಗಿ ಖಲೀಲ್ ಮಿತ್ತರಾಜೆ,ಸಂಘಟನಾ ಕಾರ್ಯದರ್ಶಿ ಯಾಗಿ ಅಲ್ತಾಫ್ ಪಂಜರಕೋಡಿ ಹಾಗೂ 13 ಮಂದಿ ಕಾರ್ಯಕಾರಿಣಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಅಸ್ಲಂ,ಝುಬೈರ್ ಮತ್ತಿತರರು ಉಪಸ್ಥಿತರಿದ್ದರು
. ಕೊನೆಗೆ ನೂತನ ಪ್ರ.ಕಾರ್ಯದರ್ಶಿ ಯಝೀದ್ ಧನ್ಯವಾದಗೈದರು.