×
Ad

ಪ್ರಜಾಪ್ರಭುತ್ವವನ್ನು ರಕ್ಷಿಸುವ ಸಾಹಿತ್ಯ ಪ್ರಕಾರಗಳು ಹೆಚ್ಚಿನ ಪ್ರಮಾಣದಲ್ಲಿ ಬರಬೇಕು: ಮೂಡ್ನಾಕೂಡು ಚಿನ್ನಸ್ವಾಮಿ

Update: 2016-12-25 12:54 IST

ಮಂಗಳೂರು, ಡಿ.25: ಪ್ರಜಾಪ್ರಭುತ್ವವನ್ನು ರಕ್ಷಿಸುವ ಸಾಹಿತ್ಯ ಪ್ರಕಾರಗಳು ಹೆಚ್ಚಿನ ಪ್ರಮಾಣದಲ್ಲಿ ಬರಬೇಕಾಗಿದೆ ಎಂದು ಜನನುಡಿ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಮುಡ್ನಾಕೂಡು ಚಿನ್ನಸ್ವಾಮಿ ಹೇಳಿದರು. 

ನಗರದ ನಂತೂರಿನ ಶಾಂತಿಕಿರಣ ಸಭಾಂಗಣದಲ್ಲಿ ರವಿವಾರ ನಡೆದ ಜನನುಡಿ-2016 ಸಾಹಿತ್ಯ ಸಮಾವೇಶದ ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜನಸಾಮಾನ್ಯರ ಧ್ವನಿ ಕೇಳಿ ಬರಬೇಕಾಗಿದೆ. ಪ್ರಸಕ್ತ ದೇಶದಲ್ಲಿ 500, 1000ರೂ. ಮುಖಬೆಲೆಯ ನೋಟುಗಳ ನಿಷೇಧದಿಂದ ಆರ್ಥಿಕ ಪರಿಸ್ಥಿತಿ ಕುಸಿದಿದ್ದು, ಜನಸಾಮಾನ್ಯರು ತೊಂದರೆಗೀಡಾಗಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆ ದುರ್ಬಲಗೊಂಡಿದೆ. ಕೋಮಾ ಸ್ಥಿತಿಗೂ ತಲುಪಬಹುದು.

ಇಂತಹ ಸಂದರ್ಭದಲ್ಲಿ ಮಹತ್ವವಲ್ಲದ ಕೆಲವು ಘಟನೆಗಳಿಗೆ ಮಾಧ್ಯಮಗಳು ಹೆಚ್ಚಿನ ಪ್ರಚಾರ ನೀಡುತ್ತಿದೆ. ಹೆಚ್ಚಿನ ಮಾಧ್ಯಮಗಳು ಮೇಲ್ವರ್ಗದ ಜನರ ಹಿಡಿತಲ್ಲಿದೆ. ಆದರೆ ಈ ನಡುವೆ ಕೊಡಗಿನ ಆದಿವಾಸಿಗಳ ಪರವಾಗಿ ನಡೆದ ಹೋರಾಟ, ಉಡುಪಿ ಚಲೋ ಅಂತಹ ಕಾರ್ಯಕ್ರಮಗಳು ಪ್ರಜಾಪ್ರಭುತ್ವ ಇನ್ನೂ ಜೀವಂತವಿದೆ ಎಂದು ಸಾಬೀತು ಪಡಿಸಿದೆ. ದೈವಮುಖಿ ಕಾವ್ಯ ಸತ್ತು ಹೋಗಿದೆ. ಪ್ರಸಕ್ತ ಪ್ರಭುತ್ವವನ್ನು ಎಚ್ಚರಿಸುವ ಕಾವ್ಯ ಹೆಚ್ಚಿನ ಪ್ರಮಾಣದಲ್ಲಿ ಬರಬೆಕಾಗಿದೆ. 

ಸ್ವಾತಂತ್ರ್ಯ ಬಂದು 70 ವಷ ಕಳೆದರೂ ತಮ್ಮ ಸಮಾಜದಲ್ಲಿ ಅಸ್ಪೃಶ್ಯತೆ ಜೀವಂತವಾಗಿದೆ. ಸಮಾನತೆಯ ಆಶ್ರಯ ಈಡೇರಿಕೆಯಾಗಿಲ್ಲ. ಜಾತಿ ಪದ್ಧತಿ ಕ್ಯಾನ್ಸರ್ ಇದ್ದಂತೆ ಅದು ನಾಶವಾಗದೆ ಇದ್ದರೆ ಸಮಾನತೆ ಸಾಧ್ಯವಿಲ್ಲ. ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸಬೇಕಾದರೆ ಜನನುಡಿ ಪ್ರಬಲವಾಗಿ ಕೇಳಿಬರಬೇಕಾಗಿದೆ. ದೇಶದಲ್ಲಿ ಪ್ರಸಕ್ತ ಅಭಿವೃದ್ಧಿಯ ಕಲ್ಪನೆಗಳು ಕೇವಲ ಮುಖವಾಡವಷ್ಟೇ ಅವರ ಹಿಂಬಾಲಕರು ಸಾಂಸ್ಕೃತಿಕ ಯುಜಮಾನಿಕೆಯನ್ನು ಪಡೆದುಕೊಳ್ಳುವ ತಂತ್ರಗಾರಿಕೆಯನ್ನು ರೂಪಿಸಿಕೊಳ್ಳುತ್ತಿದ್ದಾರೆ.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News