×
Ad

ಕಾಸರಗೋಡು: ಅಲ್ಲಲ್ಲಿ ಕ್ರಿಸ್ ಮಸ್ ಆಚರಣೆ

Update: 2016-12-25 15:41 IST

ಕಾಸರಗೋಡು, ಡಿ.25: ಕಾಸರಗೋಡಿನಲ್ಲಿ ಕ್ರಿಸ್ ಮಸ್ ಹಬ್ಬವನ್ನು  ಸಂಭ್ರಮದಿಂದ ಆಚರಿಸಲಾಯಿತು

ಶನಿವಾರ ರಾತ್ರಿ ಚರ್ಚ್ ಗಳಲ್ಲಿ ಬಲಿ ಪೂಜೆ ಹಾಗೂ ವಿಶೇಷ ಕಾರ್ಯಕ್ರಮಗಳು ನಡೆದವು  ಕಯ್ಯಾರು ಕ್ರಿಸ್ತ ರಾಜ ದೇವಾಲಯದಲ್ಲಿ ನಡೆದ ಬಲಿಪೂಜೆಯನ್ನು ಧರ್ಮಗುರು ವಿಕ್ಟರ್ ಡಿಸೋಜ ನೆರವೇರಿಸಿ ಸಂದೇಶ ನೀಡಿದರು. ಕ್ಯಾರಲ್ಸ್ ಹಾಗೂ ಇತರ ಕಾರ್ಯಕ್ರಮ ನಡೆದವು .

ಹಬ್ಬದಂಗವಾಗಿ ಮನೋರಂಜನೆ  ಕಾರ್ಯಕ್ರಮ ನಡೆದವು. ಚರ್ಚ್ ಪಾಲನಾ ಸಮಿತಿಯಲ್ಲಿ ದೀರ್ಘ  ಕಾಲ ಸೇವೆ ಸಲ್ಲಿಸಿದವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು .

ಪುಣ್ಯ ಕ್ಷೇತ್ರವಾದ ಬೇಳ ಶೋಕಮಾತಾ ದೇವಾಲಯ, ಕುಂಬಳೆ, ಮಂಜೇಶ್ವರ, ತಲಪಾಡಿ, ಕಾಸರಗೋಡು , ನಾರಂಪಾಡಿ, ಮಂಜೇಶ್ವರ  ಸೇರಿದಂತೆ  ಜಿಲ್ಲೆಯ ಎಲ್ಲಾ ಚರ್ಚ್ ಗಳಲ್ಲಿ   ರಾತ್ರಿ ಹಾಗೂ ಇಂದು ಬೆಳಿಗ್ಗೆ  ಬಳಿ ಪೂಜೆ ಹಾಗೂ ಪ್ರಾರ್ಥನೆ ನಡೆಯಿತು.

ಕ್ರೈಸ್ತ ಬಾಂಧವರು ಕ್ರಿಸ್ ಮಸ್ ಶುಭಾಶಯ ಹಂಚಿಕೊಂಡರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News