ಕೇಶವ್ ಪೊಳಲಿ ರಾಷ್ಟ್ರಮಟ್ಟಕ್ಕೆ
Update: 2016-12-25 17:47 IST
ಮೂಡುಬಿದಿರೆ , ಡಿ.25 : ಅಂಚೆ ಇಲಾಖೆ ನೌಕರರಿಗೆ ಇತ್ತೀಚಿಗೆ ನಡೆದ ರಾಜ್ಯಮಟ್ಟದ ಶಟ್ಲ್ ಬ್ಯಾಟ್ ಸ್ಪರ್ಧೆಯಲ್ಲಿ ವಿಜೇತರಾಗಿರುವ ಕೇಶವ್ ಪೊಳಲಿ ಅವರು ರಾಂಚಿಯಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಅವರು ಕರ್ನಾಟಕ ಅಂಚೆ ನೌಕರರ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಕೇಶವ್ ಪೊಳಲಿ ಅವರು ಮೂಡುಬಿದಿರೆ ಅಂಚೆ ಕಚೇರಿಯಲ್ಲಿ ಅಂಚೆ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.