ಸುರತ್ಕಲ್ : ನೂರುಲ್ ಹುದಾ ಹೆಣ್ಮಕ್ಕಳ ಪ್ರೌಢ ಶಾಲೆಯ ವಾರ್ಷಿಕ ಪ್ರತಿಭೋತ್ಸವ
ಸುರತ್ಕಲ್ , ಡಿ.25 : ಇಲ್ಲಿನ ನೂರುಲ್ ಹುದಾ ಹೆಣ್ಮಕ್ಕಳ ಪ್ರೌಢ ಶಾಲೆಯ ವಾರ್ಷಿಕ ಪ್ರತಿಭೋತ್ಸವ ಶಾಲಾ ಪ್ರಾಂಗಣದಲ್ಲಿ ಸಂಸ್ಥೆಯ ಕಾರ್ಯದರ್ಶಿ ಜಿ.ಮೊಹಮ್ಮದ್ ರವರ ಅಧ್ಯಕ್ಷತೆಯಲ್ಲಿ ಜರಗಿತು.
ಸಂಚಾಲಕ ಪಿ.ಎ.ಇಲ್ಯಾಸ್ ರವರು ಸ್ವಾಗತಿಸಿ ಪ್ರಸ್ತಾವನೆ ಗ್ಯೆದರು.
ಸ್ಥಳೀಯ ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸತ್ಯಭಾಮರವರು ಮುಖ್ಯ ಅತಿಥಿಯಾಗಿ ವಿದ್ಯಾರ್ಥಿಗಳಿಗೆ ಉಪಯುಕ್ತ ಸಲಹೆಗಳನ್ನು ನೀಡಿದರು.
ಮುಖ್ಯ ಶಿಕ್ಷಕಿ ಶ್ರೀಮತಿ ಶಕುಂತಳರವರು ಶಾಲಾ ವಾರ್ಷಿಕ ವರದಿಯನ್ನು ವಾಚಿಸಿದರು.
ಹಿರಿಯ ಟ್ರಸ್ಟಿ , ಲೆಕ್ಕ ಪರಿಶೋಧಕರೂ ಆದ ಪಿ.ಅಬ್ದುಲ್ ಹಮೀದ್, ಕೋಶಾಧಿಕಾರಿ ಪಿ.ಯಂ.ಎ.ಶರೀಫ್, ಪಣಂಬೂರ್ ಮುಸ್ಲಿಂ ಜಮಾತಿನ ಉಪಾಧ್ಯಕ್ಷ , ಸಹ-ಟ್ರಸ್ಟಿ ಜಿ.ಹುಸ್ಯೆನ್ ಬಾವಾ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ಅಝೀಝ್, ಹಿರಿಯ ಸಾಮಾಜಿಕ ಕಾರ್ಯಕರ್ತ ಪಿ.ಇ.ಮೊಹಮ್ಮದ್ ಮುಂತಾದವರು ಹಾಜರಿದ್ದರು.
ಸಹ-ಶಿಕ್ಷಕಿ ತಹ್ಸೀನಾ ಬಹುಮಾನ ವಿತರಣಾ ಕಾರ್ಯಕ್ರಮವನ್ನು ನಡೆಸಿದರು.
ಸಹ-ಶಿಕ್ಷಕಿ ರಮಾ ದೇವಿ ನಿರೂಪಿಸಿದರು. ಲತಾ ವಂದಿಸಿದರು.
ಕೊನೆಯಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರಗಿತು.