ಪುರಿ ಕಡಲ ತೀರದಲ್ಲಿ ಸಾವಿರ ಸಾಂತಾಕ್ಲಾಸ್ ಮರಳು ಶಿಲ್ಪ!
Update: 2016-12-25 19:16 IST
ಭುವನೇಶ್ವರ, ಡಿ.25: ಖ್ಯಾತ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಮತ್ತವರ ಶಿಷ್ಯರು ಕ್ರಿಸ್ಮಸ್‌ನ ಮುನ್ನಾ ದಿನವಾದ ಶನಿವಾರ ಪುರಿ ಕಡಲ ತೀರದಲ್ಲಿ ಕನಿಷ್ಠ ಒಂದು ಸಾವಿರ ಸಾಂತಾಕ್ಲಾಸ್‌ನ ಮರಳು ಶಿಲ್ಪಗಳನ್ನು ರಚಿಸಿದ್ದಾರೆ.
ಇಲ್ಲಿ ಸಾಂತಾ ಹಬ್ಬವು ಶನಿವಾರ ಆರಂಭವಾಗಿದ್ದು, ಜ.1ರ ವರೆಗೆ ನಡೆಯಲಿದೆ.
ಒಂದು ಸಾವಿರ ಸಾಂತಾಕ್ಲಾಸ್ ಮರಳು ಶಿಲ್ಪ ರಚಿಸುವ ಮೂಲಕ ಸುದರ್ಶನ್, 500 ಸಾಂತಾಕ್ಲಾಸ್ ಶಿಲ್ಪಗಳ ತನ್ನ 2012ರ ಲಿಮ್ಕಾ ದಾಖಲೆಯನ್ನು ಮುರಿಯುವ ನಿರೀಕ್ಷೆಯಿರಿಸಿದ್ದಾರೆ.
ಒಂದು ಸಾವಿರ ಸಾಂತಾಕ್ಲಾಸ್ ಶಿಲ್ಪಿಗಳ ನಿರ್ಮಾಣಕ್ಕೆ ಪಟ್ನಾಯಕ್ ಹಾಗೂ ಅವರ ಮರಳು ಶಿಲ್ಪ ಶಾಲೆಯ 35 ವಿದ್ಯಾರ್ಥಿಗಳ ತಂಡವು 4ದಿನ ಶ್ರಮಿಸಿದ್ದು, ಒಂದು ಸಾವಿರ ಟನ್ ಮರಳು ಬಳಸಿಕೊಂಡಿದೆ.