×
Ad

ಮುಲ್ಕಿ : ಅಲ್ ಮದ್ರಸತುಲ್ ಖಿಳ್‌ರಿಯಾದಲ್ಲಿ ವಾರ್ಷಿಕ ಮೌಲಿದ್ ಕಾರ್ಯಕ್ರಮ

Update: 2016-12-25 19:21 IST

ಮುಲ್ಕಿ, ಡಿ.25: ಅಲ್ ಮದ್ರಸತುಲ್ ಖಿಳ್‌ರಿಯಾ ಇಂದಿರಾನಗರ ಹಳೆಯಂಗಡಿ ಇದರ ವತಿಯಿಂದ ಆಯೋಜಿಸಲಾಗಿದ್ದ ವಾರ್ಷಿಕ ಮೌಲಿದ್ ಮಜ್ಲೀಸ್ ಹಾಗೂ ಮಕ್ಕಳ ಪ್ರತಿಭಾ ಸ್ಪರ್ಧೆ ಕಾರ್ಯಕ್ರಮವು  ಮದರಸದ ವಠಾರದಲ್ಲಿ ಜರಗಿತು.

 ಕದಿಕೆ ಕೇಂದ್ರ ಜುಮಾ ಮಸೀದಿಯ ಖತೀಬ್ ಅಬ್ದುಲ್ ರೆಹಮಾನ್ ಪೈಝಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಸಾಗ್ ಬದ್ರಿಯಾ ಜುಮಾ ಮಸೀದಿಯ ಖತೀಬ್ ಇ.ಎಂ. ಅಬ್ದುಲ್ಲಾ ಮದನಿ ನೆರವೇರಿಸಿದರು.

ಸಂತೆಕಟ್ಟೆ ಜುಮ ಮಸೀದಿಯ ಖತೀಬ್ ಇಸ್ಮಾಯೀಲ್ ದಾರಿಮಿ ಪ್ರಸ್ತಾವಿಕ ಮಾತುಗಳನ್ನಾಡಿದರು.

ಈ ಸಂದರ್ಭ ಖಿಲ್‌ರಿಯಾ ಮದ್ರಸದ ಉಸ್ತಾದರಾದ ಜಿ.ಎಂ ದಾರಿಮಿ, ಅಬ್ದುಲ್ ರಝಾಕ್ ಮುಸ್ಲಿಯಾರ್, ಮದರಸ ಸಮಿತಿಯ ಅಧ್ಯಕ್ಷ ಯೂಸೂಫ್ ಇಂದಿರಾನಗರ, ಕಾರ್ಯದರ್ಶಿ ಅಬ್ದುಲ್ಲಾ ಮುಸ್ಲಿಯಾರ್, ಕದಿಕೆ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಅಬ್ದುಲ್ ರೆಹಮಾನ್ ಸಾಗ್, ಕಾರ್ಯದರ್ಶಿ ಅಬ್ದುಲ್ ರಝಾಕ್, ಹಳೆಯಂಗಡಿ ಗ್ರಾಮ ಪಮಚಾಯತ್ ಸದಸ್ಯ ಎಂ.ಅಬ್ದುಲ್ ಖಾದರ್ ಮತ್ತಿತರರು  ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News