×
Ad

ಇನೋಳಿ ಬಿ.ಸೈಟ್ ಮದರಸಾದಲ್ಲಿ ಮಕ್ಕಳ ಸಾಹಿತ್ಯ ಸಂಗಮ

Update: 2016-12-25 20:09 IST

ಕೊಣಾಜೆ , ಡಿ.25 : ಇನೋಳಿ ಬಿ.ಸೈಟ್ ಹಿದಾಯತುಲ್ ಇಸ್ಲಾಂ ಮದರಸ, ಮಸ್ಜಿದುರ್ರಹ್ಮಾನ್ ಇದರ ಜಂಟಿ ಆಶ್ರಯದಲ್ಲಿ ಮದರಸಾದಲ್ಲಿ ಮಕ್ಕಳ ಸಾಹಿತ್ಯ ಸಂಗಮ ಹಾಗೂ ಬುರ್ದಾ ಬೈತ್ ಕಾರ್ಯಕ್ರಮ ನಡೆಯಿತು. 

ಇನೋಳಿ ಜಾಮಿಯಾ ಮುಬಾರಕ್ ಜುಮಾ ಮಸೀದಿಯ ಖತೀಬ್ ಅಹ್ಮದ್ ದಾರಿಮಿ ಮಾತನಾಡಿ, ಪ್ರವಾದಿ (ಸ.ಅ) ಅವರ ಮೇಲಿನ ಪ್ರೀತಿ, ವಿಶ್ವಾಸ ಇರುವವರು ಜೀವನಪರ್ಯಂತ ಗುಣಗಾನ ಮಾಡುತ್ತಲೇ ಇರಬೇಕು, ಯಾಕೆಂದರೆ ಅವರ ಗುಣಗಾನ ಯಾವುದೇ ಕಾಲಕ್ಕೂ ಸೀಮಿತವಲ್ಲ ಎಂದು ಅಭಿಪ್ರಾಯಪಟ್ಟರು.

ಪ್ರವಾದಿ (ಸ.ಅ) ಅವರಿಗೆ ಹಲವಾರು ಹೆಸರುಗಳಿವೆ.  ಲೋಕಕ್ಕೆ ಪ್ರವಾದಿಯಾಗಿರುವ ಅವರನ್ನು ನೆನಪಿಸುವ ಕಾರ್ಯ ಒಂದು ತಿಂಗಳು ಅಥವಾ ಒಂದು ದಿನಕ್ಕೆ ಸೀಮಿತವಾಗಬಾರದು.  ಅವರ ಮೇಲಿನ ಗುಣಗಾನ ಮುಗಿಯದ ಅಧ್ಯಾಯ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಇನೋಳಿ ಎ.ಸೈಟ್ ಹಿದಾಯತುಲ್ ಇಸ್ಲಾಂ ಮದರಸದ ಮುಅಲ್ಲಿಂದ ಅಬೂಬಕ್ಕರ್ ಸಖಾಫಿ ಮಾತನಾಡಿ, ಪ್ರವಾದಿ (ಸ.ಅ) ಅವರು ನ್ಯಾಯಪರವಾಗಿದ್ದರು.  ತಮ್ಮ ಮೇಲೆ ಯಾರಿಗಾದರೂ ಬೇಸರ ಅಥವಾ ಕೋಪವಿದ್ದಲ್ಲಿ ಸೇಡು ತೀರಿಸಿಕೊಳ್ಳಬಹುದು ಎಂದು ಕೊನೆಯ ಭಾಷಣದಲ್ಲಿ ಜನರ ಬಳಿ ಹೇಳಿದ್ದು ಅವರ ನ್ಯಾಯಪರತೆಗೆ ಸಾಕ್ಷಿ. ಅವರ ಮೇಲಿನ ಪ್ರೀತಿಯಿಂದ ಕಾರ್ಯಕ್ರಮ ನಡೆಸಲು ವಿರೋಧಿಸುವುದು ಸಲ್ಲದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News