ಉಡುಪಿ : ಆಳ್ವಾಸ್ ಸಾಂಸ್ಕೃತಿಕ ವೈಭವ

Update: 2016-12-25 15:04 GMT

ಉಡುಪಿ, ಡಿ.25: ಇಂದಿನ ಆಧುನಿಕ ಯುಗದಲ್ಲಿ ಮಕ್ಕಳು ಮೊಬೈಲ್ ಚಾರ್ಜ್ ಮಾಡಿದಂತೆ ಅವರೊಳಗಿನ ಅಂತರ್‌ಶಕ್ತಿ ಹಾಗೂ ಮನೋ ಧರ್ಮ ವೃದ್ಧಿಸಲು ಚಾರ್ಜ್ ಮಾಡುವ ಕೆಲಸ ಆಗಬೇಕು. ಅದು ಕಲೆ, ಸಂಸ್ಕೃತಿಯಿಂದ ಮಾತ್ರ ಸಾಧ್ಯ ಎಂದು ಸಾಹಿತಿ ವೈದೇಹಿ ಹೇಳಿದ್ದಾರೆ.

ಉಡುಪಿ ಶ್ರೀಕೃಷ್ಣ ಮಠ, ಪರ್ಯಾಯ ಪೇಜಾವರ ಮಠ ಮತ್ತು ಆಳ್ವಾಸ್ ನುಡಿಸಿರಿ ವಿರಾಸತ್ ಉಡುಪಿ ಘಟಕದ ಆಶ್ರಯದಲ್ಲಿ ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ರವಿವಾರ ಉಡುಪಿ ರಾಜಾಂಗಣದ ಪಾರ್ಕಿಂಗ್ ಪ್ರದೇಶದಲ್ಲಿ ಹಮ್ಮಿಕೊಳ್ಳಲಾದ ಆಳ್ವಾಸ್ ಸಾಂಸ್ಕೃತಿಕ ವೈಭವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಇಂದು ಅಭಿರುಚಿಯ ಮೇಲೆ ದಾಳಿಗಳು, ಪ್ರಭಾವಗಳು ಬೀರುತ್ತಿವೆ. ಮನುಷ್ಯನ ಮನಸ್ಸನ್ನು ಬಂಜರು ಮಾಡಿ ಕೇವಲ ಹಣವನ್ನು ತುಂಬಿಸಲಾಗು ತ್ತಿದೆ. ಕೊನೆಗೆ ಅದರಲ್ಲಿ ಅಂತ್ಯ ಕಾಣುತ್ತೇವೆ. ಹೀಗಾಗಿ ಈ ಕಲೆಯ ಅಭಿ ರುಚಿಯನ್ನು ಬೆಳೆಸಿಕೊಳ್ಳುವ ಕೆಲಸ ಮಾಡಬೇಕು ಎಂದರು.

ಕಾರ್ಯಕ್ರಮವನ್ನು ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡಿದರು.]

ಈ ಸಂದರ್ಭದಲ್ಲಿ ಮಹಾರಾಷ್ಟ್ರದ ಶಿಕ್ಷಣ ತಜ್ಞ ಡಾ.ವಿಶ್ವನಾಥ್ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು. ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿದರು.

ವೇದಿಕೆಯಲ್ಲಿ ಡಾ.ಎಚ್.ಎಸ್.ಬಲ್ಲಾಳ್, ರಘುರಾಮ ಆಚಾರ್ಯ, ರಘುಪತಿ ಭಟ್, ರತ್ನಕುಮಾರ್, ಮನೋಹರ್ ಶೆಟ್ಟಿ, ಜಯರಾಜ ಹೆಗ್ಡೆ, ಪುರುಷೋತ್ತಮ ಶೆಟ್ಟಿ, ಭುವನೇಂದ್ರ ಕಿದಿಯೂರು, ತಲ್ಲೂರು ಶಿವರಾಮ ಶೆಟ್ಟಿ, ಕೆ.ಗಣೇಶ್ ರಾವ್, ನಾಗೇಶ್ ಹೆಗ್ಡೆ, ಡಾ.ಶ್ರೀಕಾಂತ್, ಡಾ.ವೈ.ಎನ್. ಶೆಟ್ಟಿ, ಡಾ.ಅಮ್ಮುಂಜೆ ಅರವಿಂದ ನಾಯಕ್, ಮುಹಮ್ಮದ್ ವೌಲ ಉಪಸ್ಥಿತರಿದ್ದರು.

ಘಟಕದ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ ಸ್ವಾಗತಿಸಿದರು.

ಕಾರ್ಯದರ್ಶಿ ಭುವನ ಪ್ರಸಾದ್ ಹೆಗ್ಡೆ ವಂದಿಸಿದರು.

ಮುರಳಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.

ಬಳಿಕ ದೇಶ-ವಿದೇಶಗಳ ವಿವಿಧ ಪ್ರಕಾರದ ಶಾಸ್ತ್ರೀಯ, ಜಾನಪದ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News