×
Ad

ಪ್ರಜ್ಞಾವಂತ ದಲಿತರು ಶೋಷಿತರ ದ್ವನಿಯಾಗಿ: ಜಯನ್ ಮಲ್ಪೆ

Update: 2016-12-25 21:25 IST

ಬೈಂದೂರು, ಡಿ.25: ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ಬಂದು ಆರು ದಶಕಗಳೇ ಕಳೆದರೂ ಇಂದಿಗೂ ದಲಿತರಿಗೆ ಮನೆಯಿಲ್ಲದೇ, ತುಂಡು ಭೂಮಿ ಇಲ್ಲದೆ, ತುತ್ತು ಅನ್ನಕ್ಕೂ ಪರದಾಡಬೇಕಾದ ದೀನಸ್ಥಿತಿ ಇದೆ. ಹಾಗಾಗಿ ಪ್ರಜ್ಞಾವಂತ ದಲಿತರು ಸಂಘಟಿತರಾಗಿ ಶೋಷಿತ ಸಮುದಾಯದ ಧ್ವನಿಯಾಗಬೇಕುಎಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆಹೇಳಿದ್ದಾರೆ.

ದಲಿತ ಮಹಿಳಾ ಒಕ್ಕೂಟದ ವತಿಯಿಂದ ಬೈಂದೂರಿನ ಹಳಗೇರಿಯಲ್ಲಿ ರವಿವಾರ ಆಯೋಜಿಸಲಾದ ದಲಿತ ಮಹಿಳಾ ಜಾಗೃತಿ ಸಮಾವೇಶದಲ್ಲಿ ಮುಖ್ಯ ಭಾಷಣಗಾರರಾಗಿ ಅವರು ಮಾತನಾಡುತಿದ್ದರು.

 ದಲಿತರ ಅಭಿವೃದ್ಧಿಗಾಗಿ ಮೀಸಲಿಟ್ಟ ಶೇ.20ರ ನಿಧಿ ಎಲ್ಲಡೆ ದುರುಪ ಯೋಗವಾಗುತ್ತಿದ್ದು, ದಲಿತರ ಜಮೀನುಗಳು ಇತರರ ಅಕ್ರಮ ವಶದಲ್ಲಿದೆ. ಭೂಪರಬಾರೆ ನಿಷೇಧ ಜಾರಿಯಲ್ಲಿದ್ದರೂ ದಲಿತರು ಭೂ ಹೀನರಾಗುತ್ತಿ ದ್ದಾರೆ. ಅವರು ಘನತೆಯ ಬದುಕಿನ ಹಕ್ಕಿನಿಂದಲೇ ವಂಚಿಸಲ್ಪಡುತ್ತಿದ್ದಾರೆ. ದಲಿತ ಚಳಚಳಿಯಲ್ಲಿ ಮಹಿಳೆಯರನ್ನು ದೂರ ಇಟ್ಟಿರುವುದರಿಂದಲೇ ದಲಿತ ಸಂಘಟನೆ ವಿಘಟನೆ ಹೊಂದಲು ಕಾರಣ ಎಂದವರು ಅಭಿಪ್ರಾಯಪಟ್ಟರು. ಕಾರ್ಯಕ್ರಮವನ್ನು ಜಿಪಂ ಸದಸ್ಯೆ ಗೌರಿ ದೇವಾಡಿಗ ಉದ್ಘಾಟಿಸಿದರು.

ದಲಿತ ಮಹಿಳಾ ಒಕ್ಕೂಟದ ಸಂಚಾಲಕಿ ನಯನಾ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬ್ರಹ್ಮಾವರದ ನಿವೃತ್ತ ಉಪ ನೊಂದಾವಣಾಧಿಕಾರಿ ಸರೋಜಿನಿ, ದಲಿತ ಮುಖಂಡರಾದ ರಾಜು ಬೆಟ್ಟಿನಮನೆ, ನರಸಿಂಹ ಹಳಗೇರಿ, ಶಾರದಾ ಕೆದೂರು, ನೇತ್ರಾವತಿ, ಚಂದ್ರ ಹಳಗೇರಿ, ಕೆ.ಮಹಾ ಬಲ, ಶಿಕ್ಷಣ ಸಂಯೋಜಕ ವೆಂಕಪ್ಪಮೊದಲಾದವರು ಉಪಸ್ಥಿತರಿದ್ದರು.

ದಸಂಸ ಜಿಲ್ಲಾ ಪ್ರಧಾನ ಸಂಘಟನಾ ಸಂಚಾಲಕ ಮಂಜುನಾಥ ಗಿಳಿ ಯಾರು ಪ್ರಾಸ್ತಾವಿಕವಾಗಿ ಮಾತನಾಡಿದರು. ದಲಿತ ನಾಯಕ ವಾಸುದೇವ ಮುದೂರು ನೂತನ ಪಧಾದಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಆನಂದ ಮಚ್ಚುಟ್ಟು ಸ್ವಾಗತಿಸಿ, ಚೈತ್ರ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News