ಸುಳ್ಯದಲ್ಲಿ ಯಾದವ ಜಿಲ್ಲಾ ಸಮ್ಮೇಳನ
ಸುಳ್ಯ, ಡಿ.25 : ಯಾದವ ಸಭಾ ಕರ್ನಾಟಕ ಕೇಂದ್ರ ಸಮಿತಿ ಮಂಗಳೂರು ಮತ್ತು ಸುಳ್ಯ, ಪುತ್ತೂರು ಬಂಟ್ವಾಳ ಹಾಗೂ ಮಂಗಳೂರು ತಾಲೂಕು ಸಮಿತಿಗಳ ಸಹಯೋಗದಲ್ಲಿ ಯಾದವ ಜಿಲ್ಲಾ ಸಮ್ಮೇಳನವು ಸುಳ್ಯದ ಶಿವಕೃಪಾ ಕಲಾಮಂದಿರದಲ್ಲಿ ನಡೆಯಿತು.
ಬೆಳಿಗ್ಗೆ ಸತ್ಯನಾರಾಯಣ ದೇವರ ಪೂಜೆ ನಡೆದು ಬಳಿಕ ಸಮ್ಮೇಳನದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಿತು. ಶಾಸಕ ಎಸ್.ಅಂಗಾರ ಸಮ್ಮೇಳನವನ್ನು ಉದ್ಘಾಟಿಸಿದರು.
ಜಾತಿ ಸಂಘಟನೆಗಳನ್ನು ರಾಜಕೀಯ ದೃಷ್ಟಿಕೋನ ಇರಿಸಿಕೊಂಡು ಬಲಪಡಿಸಬಾರದು. ಇಂತಹ ಉದ್ದೇಶಗಳಿದ್ದರೆ ಸಂಘಟನೆಗಳು ದೀರ್ಘ ಬಾಳ್ವಿಕೆ ಇರುವುದಿಲ್ಲ ಎಂದ ಶಾಸಕರು , ಸಮುದಾಯ ಸಂಘಟನೆಗಳು ಸಮಾವೇಶ ಮತ್ತು ಸಮುದಾಯ ಭವನಗಳಿಗೆ ಸೀಮಿತಗೊಳ್ಳದೆ ಕುಲದ ಸರ್ವತೋಮುಖ ಅಭಿವೃದ್ದಿಗೆ ಪಣತೊಡಬೇಕು ಎಂದರು.
ಜಾತಿ ಜಾತಿಗಳ ನಡುವೆ ಪ್ರೀತಿ ಇರಬೇಕು. ಇತಿಹಾಸದ ನೆನಪಿನೊಂದಿಗೆ ವರ್ತಮಾನವನ್ನು ಕಟ್ಟಬೇಕು ಎಂದವರು ಹೇಳಿದರು.
ಯಾದವ ಸಭಾ ಕೇಂದ್ರ ಸಮಿತಿಯ ಅಧ್ಯಕ್ಷರಾದ ಮಧುಸೂದನ ಆಯರ್ ಅಧ್ಯಕ್ಷತೆ ವಹಿಸಿದ್ದರು.
ವಿಶೇಷ ಆಹ್ವಾನಿತರಾಗಿ ಯಾದವ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಲಕ್ಷ್ಮೀಪತಿ, ಯಾದವ ಕ್ಷೇಮ ನಿಧಿ ಗೌರವಾಧ್ಯಕ್ಷ ಡಿ.ಟಿ.ಶ್ರೆನಿವಾಸ್, ಅಖಿಲ ಭಾರತ ಯಾದವ ಮಹಾ ಸಭಾದ ಉಪಾಧ್ಯಕ್ಷೆ ಶ್ರೆಮತಿ ಕೆ.ಪೂರ್ಣಿಮಾ ಶ್ರೀನಿವಾಸ್, ಯಾದವ ಸಂಘದ ರಾಜ್ಯ ಪದಾಧಿಕಾರಿ ಉಮಾಶಂಕರ್ , ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೆಮತಿ ಪುಷ್ಪಾವತಿ ಬಾಳಿಲ ಆಗಮಿಸಿದ್ದರು.
ಕೇಂದ್ರ ಸಮಿತಿಯ ಉಪಾಧ್ಯಕ್ಷೆ ಶುಭಲಕ್ಷ್ಮೀ ಆರ್ಲಪದವು, ಪುತ್ತೂರು ತಾಲೂಕು ಸಮಿತಿ ಅಧ್ಯಕ್ಷ ನಾಗರಾಜ ತಲಪ್ಪಾಡಿ, ಬಂಟ್ವಾಳ ತಾಲೂಕು ಸಮಿತಿಯ ಅಧ್ಯಕ್ಷ ಗೋಪಾಲ್ ಅರಿಕೆಪದವು, ಮಂಗಳೂರು ತಾಲೂಕು ಸಮಿತಿಯ ಅಧ್ಯಕ್ಷ ಸದಾನಂದ ಕಾವೂರು ಭಾಗವಹಿಸಿದ್ದರು.
ಸುಳ್ಯ ಸಮಿತಿ ವತಿಯಿಂದ ಕೊಡಮಾಡುವ ಈ ವರ್ಷದ ಯಾದವಶ್ರೀ ಪ್ರಶಸ್ತಿಯನ್ನು ಅಕ್ಕಪ್ಪಾಡಿ ಅಪ್ಪಯ್ಯ ಮಣಿಯಾಣಿಯವರಿಗೆ ನೀಡಿ ಗೌರವಿಸಲಾಯಿತು.
ಯಾದವ ಸಭಾ ಸುಳ್ಯ ತಾಲೂಕು ಸಮಿತಿ ಅಧ್ಯಕ್ಷ ಎ.ಕೆ.ಮಣಿಯಾಣಿ ಸ್ವಾಗತಿಸಿದರು. ಯಾದವ ಸಭಾ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಸುಧಾಮ ಆಲೆಟ್ಟಿ ಪ್ರಸ್ತಾವನೆಗೈದರು. ಕಾರ್ಯದರ್ಶಿ ಕರುಣಾಕರ ಹಾಸ್ಪಾರೆ ವಂದಿಸಿದರು.
ಅಚ್ಚುತ ಅಟ್ಲೂರು, ರಾಜೇಶ್ ಸುಳ್ಯ ಕಾರ್ಯಕ್ರಮ ನಿರೂಪಿಸಿದರು.