×
Ad

ಕೆಲಸ ಕೊಡಿಸುವುದಾಗಿ ನಂಬಿಸಿ ಮೋಸ

Update: 2016-12-25 22:20 IST

ಶಂಕರನಾರಾಯಣ, ಡಿ.25: ಕೆಲಸ ಕೊಡಿಸುವುದಾಗಿ ನಂಬಿಸಿ ಯುವತಿ ಯೊಬ್ಬಳಿಂದ ಲಕ್ಷಾಂತರ ರೂ. ಹಣ ಪಡೆದು ವಂಚಿಸಿರುವ ಬಗ್ಗೆ ಶಂಕರ ನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಳ್ಳುಂಜೆ ಎಲ್ಮಣ್ಣು ನಿವಾಸಿ ನಾಗರತ್ನಾ ದೇವಾಡಿಗ ಎಂಬವರ ಮಗಳು ಅಕ್ಷತಾ(25) ಎಂಬವರಿಗೆ ಫೇಸ್ಬುಕ್ ಮೂಲಕ ಕೊಕ್ಕರ್ಣೆ ಹೊರ್ಲಾಳಿಯ ಆದರ್ಶ್ ಎಂಬಾತನ ಪರಿಚಯವಾಗಿದ್ದು, ಬೆಂಗಳೂರಿನಲ್ಲಿ ಕೆಲಸ ಕೊಡಿಸು ವುದಾಗಿ ಹೇಳಿ ಆತ ಅಕ್ಷತಾಳಿಂದ ಹಣ ಪಡೆದಿದ್ದನು. ಅಕ್ಷತಾ ಫೆ.23ರಿಂದ ಮಾ.4ರವರೆಗೆ ಒಟ್ಟು 70,000ರೂ. ಹಣವನ್ನು ಆತನ ಖಾತೆಗೆ ಹಾಕಿದ್ದರು.

ಆದರೆ ಕೆಲಸ ಕೊಡಿಸುವ ಬಗ್ಗೆ ಕೇಳಿದಾಗ ಆತನ ಹೆಚ್ಚು ಹಣಕ್ಕೆ ಬೇಡಿಕೆ ಇಟ್ಟಿದ್ದು, ಅದರಂತೆ ಆದರ್ಶ್‌ನ ಬ್ಯಾಂಕ್ ಖಾತೆಗೆ ಹಾಗೂ ಕೈಯಲ್ಲಿ ನಗದು ರೂಪವಾಗಿ ಜು.18ರವರೆಗೆ 3,95,000ರೂ. ನೀಡಲಾಗಿತ್ತು. ಅಲ್ಲದೆ 22 ಗ್ರಾಂ ಚಿನ್ನದ ಸರವನ್ನು ಆತ ತೆಗೆದುಕೊಂಡಿದ್ದನು. ನಂತರ ಆತ ಕೆಲಸ ಕೊಡಿಸದೆ ಹಣವನ್ನು ವಾಪಾಸು ನೀಡದೆ ಮೋಸ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News