×
Ad

ಮೂಡುಬಿದಿರೆಯಲ್ಲಿ ಅಟಲ್‌ಬಿಹಾರಿ ವಾಜಪೇಯಿರವರ ಜನ್ಮ ದಿನಾಚರಣೆ

Update: 2016-12-25 23:23 IST

ಮೂಡುಬಿದಿರೆ, ಡಿ.25 : ಬಿಜೆಪಿ ಮೂಡುಬಿದಿರೆ ನಗರ ಶಕ್ತಿ ಕೇಂದ್ರ ವತಿಯಿಂದ ಮಾಜಿ ಪ್ರಧಾನಿ ಭಾರತ ರತ್ನ ಅಟಲ್‌ಬಿಹಾರಿ ವಾಜಪೇಯಿರವರ ಜನ್ಮ ದಿನಾಚರಣೆಯ ಅಂಗವಾಗಿ ಸರ್ಕಾರಿ ಆಸ್ಪತ್ರೆಗೆ ಬೆಡ್‌ಸ್ಪ್ರೆಡ್‌ಗಳನ್ನು ಕೊಡುಗೆಯಾಗಿ ನೀಡಲಾಯಿತು.

ಸರ್ಕಾರಿ ಆಸ್ಪತ್ರೆಯ ಡಾ.ಜ್ಞಾನೇಶ್ ಕಾಮತ್ಅವರಿಗೆಹಿರಿಯ ಬಿ.ಜೆ.ಪಿ ಕಾರ್ಯಕರ್ತ ಪುರಸಭೆ ಸದಸ್ಯ ಎಂ. ಬಾಹುಬಲಿ ಪ್ರಸಾದ್‌ರವರು
ಬೆಡ್‌ಸ್ಪ್ರೆಡ್‌ಗಳನ್ನು ಹಸ್ತಾಂತರಿಸಿದರು. ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು.

ಬಿಜೆಪಿಯ ರಾಜ್ಯ ಪರಿಷತ್ ಸದಸ್ಯ ಕೆ. ಆರ್. ಪಂಡಿತ್, ಜಿಲ್ಲಾ ಉಪಾಧ್ಯಕ್ಷ ಕೆ.ಪಿ. ಜಗದೀಶ್ ಅಧಿಕಾರಿ, ಹಿಂದುಳಿದ ವರ್ಗ ಘಟಕದ ಅಧ್ಯಕ್ಷ ಗೋಪಾಲ್ ಶೆಟ್ಟಿಗಾರ್, ಕಾರ್ಯದರ್ಶಿ ಹರೀಶ್ ಎಂ. ಕೆ, ಜಿಲ್ಲಾ ಬಿ.ಜೆ.ಪಿ ಸದಸ್ಯ ಕೆ. ಕೃಷ್ಣರಾಜ ಹೆಗ್ಡೆ, ಲಕ್ಷ್ಮೀಶ, ಪ್ರವೀಶ್, ದಿನೇಶ್ ತಿರುಮಲಬೆಟ್ಟು, ರಾಜೇಶ್ ಶೆಟ್ಟಿ, ಪುರಸಭಾ ಸದಸ್ಯರಾದ ಲಕ್ಷ್ಮಣ ಪೂಜಾರಿ, ಪ್ರಸಾದ್ ಕುಮಾರ್, ನಾಗರಾಜ ಪೂಜಾರಿ, ದಿನೇಶ್ ಪೂಜಾರಿ, ಮಹಿಳಾ ಮೋರ್ಚಾದ ಪ್ರಮುಖರಾದ ಗೀತಾ ಆಚಾರ್ಯ, ಜಯಲಕ್ಷ್ಮೀ ನಾಯಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News