‘ಮೈಸೂರು ಸಿಲ್ಕ್’ ಸೀರೆಗಳ ಪ್ರದರ್ಶನ ಮತ್ತು ಮಾರಾಟ
ಮಂಗಳೂರು, ಡಿ. 26: ಕರ್ನಾಟಕ ರೇಶ್ಮೆ ಉದ್ಯಮಗಳ ನಿಗಮ ನಿಯಮಿತ (ಕೆಎಸ್‌ಐಸಿ) ವತಿಯಿಂದ ಕರ್ನಾಟಕದ ಪಾರಂಪಾರಿಕ ಉತ್ಪನ್ನವಾದ ‘ಮೈಸೂರು ಸಿಲ್ಕ್’ ಸೀರೆಗಳ ಪ್ರದರ್ಶನ ಮತ್ತು ಮಾರಾಟವನ್ನು ಲಾಲ್‌ಬಾಗ್‌ನ ನೆಹರೂ ಅವಿನ್ಯೂ ರಸ್ತೆಯ ಹಿಂದಿ ಪ್ರಚಾರ ಭವನದಲ್ಲಿ ಇಂದು ಉದ್ಘಾಟನೆಗೊಂಡಿತು.
ಡಿಸೆಂಬರ್ 29ರವರೆಗೆ ನಡೆಯುವ ಈ ಪ್ರದರ್ಶನ ಮತ್ತು ಮಾರಾಟವನ್ನು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ಉದ್ಘಾಟಿಸಿದರು. ತಾಲೂಕು ಪಂಚಾಯತ್ ಅಧ್ಯಕ್ಷ ಮೋನು, ‘ಮೈಸೂರು ಸಿಲ್ಕ್’ನ ಮಾರುಕಟ್ಟೆ ವ್ಯವಸ್ಥಾಪಕ ಬಾನುಪ್ರಕಾಶ್, ಉಸ್ತುವಾರಿ ವಹಿಸುವ ಕುಮಾರಸ್ವಾಮಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕೆಎಸ್‌ಐಸಿ ವಿವಿಧ ವಿನ್ಯಾಸವುಳ್ಳ ಕ್ರೇಪ್ ಡಿಸೈನ್, ಜಾರ್ಜೆಟ್ ಮತ್ತು ಸಾದಾ ಮುದ್ರಿತ ಸೀರೆಗಳು, ಟೈ, ಸ್ಕಾರ್ಫ್ ಇತ್ಯಾದಿ ಉತ್ಪನ್ನಗಳ್ನ್ನು ಪ್ರದರ್ಶಿಸುತ್ತಿದೆ. ಕೆಎಸ್‌ಐಸಿ ಎಲ್ಲಾ ಉತ್ಪನ್ನಗಳಿಗೆ ಶೇ. 20ರವರೆಗೆ ರಿಯಾಯತಿ ಇದ್ದು, ಸರಕಾರಿ ನೌಕರರಿಗೆ ಬಡ್ಡಿ ರಹಿತ ಸುಲಭ ಕಂತುಗಳಲ್ಲಿ ಮೈಸೂರು ಸಿಲ್ಕ್ ಸೀರೆಗಳನ್ನು ಖರೀದಿಸಲು ಅವಕಾಶವಿದೆ ಎಂದು ಪ್ರಕಟನೆ ತಿಳಿಸಿದೆ.