×
Ad

ಮಂಜನಾಡಿ: ನೂತನ ಬಸ್ಸು ತಂಗುದಾಣ ಉದ್ಘಾಟನೆ

Update: 2016-12-26 22:09 IST

ಕೊಣಾಜೆ, ಡಿ.26 : ಸರಕಾರ ಮಾಡಬೇಕಾದ ಕೆಲಸವನ್ನು ಉದ್ಯಮಿಗಳು ಸ್ವ ಇಚ್ಛೆಯಿಂದ ಮಾಡಿ ಅದನ್ನು ಸಮಾಜಕ್ಕೆ ಅರ್ಪಿಸುವುದರಿಂದ ಸರಕಾರಕ್ಕೆ ಇತರ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಹೆಚ್ಚು ಅವಕಾಶ ಕಲ್ಪಿಸಿಕೊಟ್ಟಂತಾಗುತ್ತದೆ ಎಂದು ಮೂಡ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಅಭಿಪ್ರಾಯಪಟ್ಟರು.

 ಮಂಜನಾಡಿಯ ಪರ್ತಿಪಾಡಿ ದಿವಂಗತ ಪಿ. ಎಸ್. ಮಹಮ್ಮದ್ ಹಾಜಿ ಸ್ಮರಣಾರ್ಥ ಮಂಜನಾಡಿಯ ಮಂಗಳಾಂತಿ ಜಂಕ್ಷನ್‌ನಲ್ಲಿ ನಿರ್ಮಿಸಿದ ಸಾರ್ವಜನಿಕ ಬಸ್ಸು ತಂಗುದಾಣ ಉದ್ಘಾಟಿಸಿ ಅವರು ಮಾತನಾಡಿದರು.

 ಮಂಜನಾಡಿ ಕೇಂದ್ರ ಜುಮಾ ಮಸೀದಿ ಖತೀಬ್ ಅಹ್ಮದ್ ಬಾಖವಿ ಉಚ್ಚಿಲ ದುಅ ನೆರವೇರಿಸಿದರು.

ಉದ್ಯಮಿ ಝಕರಿಯ್ಯ ಜೋಕಟ್ಟೆ, ಭಾರತೀಯ ಕೃಷಿಕ ಸಮಾಜದ ಅಧ್ಯಕ್ಷ ಎ.ಎ ಹೈದರ್ ಪರ್ತಿಪಾಡಿ, ಕಾಂಗ್ರೆಸ್ ಮುಖಂಡ ಟಿ.ಎಸ್. ಅಬ್ದುಲ್ಲಾ, ಜೆಡಿಎಸ್ ಮುಖಂಡ ಹಾಜಿ ಅಬೂಬಕ್ಕರ್ ನಾಟೆಕಲ್, ಅತೀಂ ಕುಂಞ, ಸ್ಥಳೀಯರಾದ ಕುಶಾಲ್‌ನಾಥ್ ರೈ, ಪರ್ತಿಪಾಡಿ ಕುಟುಂಬಸ್ಥರಾದ ಹಾಜಿ ಪಿ.ಎಸ್ ಅತ್ತವುಲ್ಲಾ ಪರ್ತಿಪ್ಪಾಡಿ, ಹಂಸೀರ್ ಪರ್ತಿಪ್ಪಾಡಿ, ಕಿಸಾರ್ ಪರ್ತಿಪ್ಪಾಡಿ, ಝಲ್ಫಿಕಾರ್ ಪರ್ತಿಪ್ಪಾಡಿ ಹಾಗೂ ಇಪ್ತಿಕಾರ್ ಪರ್ತಿಪ್ಪಾಡಿ ಉಪಸ್ಥಿತರಿದರು.

ಶಿಕ್ಷಕ ಕೆ.ಎಂ.ಕೆ. ಮಂಜನಾಡಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News