ರೋಟೋ ಲಾಯರ್ಸ ಕಪ್ ಚೆಸ್: ಜಂಟಿ ಮುನ್ನಡೆಯಲ್ಲಿ ನಿತಿನ್
ಬೆಳ್ತಂಗಡಿ, ಡಿ.26 : ಇಲ್ಲಿನ ಮಂಜುನಾಥ ಕಲಾಭವನದಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಮಟ್ಟದ ರೋಟೋ ಲಾಯರ್ಸ್ ಚೆಸ್ ಮುಕ್ತ ಪಂದ್ಯಾಟದಲ್ಲಿ ಮೂರನೇ ದಿನವಾದ ಸೋಮವಾರವೂ ತಮಿಳುನಾಡಿನ ಇಂಟರ್‌ನ್ಯಾಶನಲ್ ಚೆಸ್ ಮಾಸ್ಟರ್ ನಿತಿನ್ ಎಸ್. ಸಹಿತ 6 ಮಂದಿ 5 ಪೂರ್ಣಾಂಕದ ಮನ್ನಡೆಯನ್ನು ಕಾಯ್ದುಕೊಂಡಿದ್ದಾರೆ.
5ನೇ ಸುತ್ತಿನ ಅಂತ್ಯಕ್ಕೆ ಅಗ್ರಶ್ರೇಯಾಂಕದ ಇಂಟರ್ ನ್ಯಾಶನಲ್ ಮಾಸ್ಟರ್ ತಮಿಳುನಾಡಿನ ನಿತಿನ್, ಮೈಸೂರಿನ ಇಂಟರ್ ನ್ಯಾಶನಲ್ ಮಾಸ್ಟರ್ ಗಿರೀಶ್ ಕೌಶಿಕ್, ಮಂಗಳೂರಿನ ಗಹನ್.ಎಮ್.ಜಿ, ಕೊಡಗಿನ ಅಗಸ್ಟಿನ್, ಬೆಂಗಳೂರಿನ ಮಂಜುನಾಥ್.ಜಿ, ಸ್ಥಳೀಯ ಪ್ರತಿಭೆ ಇಶಾ ಶರ್ಮ ಪೂರ್ಣಾಂಕದ ಮುನ್ನಡೆಯಲ್ಲಿದ್ದಾರೆ.
ಇಂದಿನ ಅತ್ಯಂತ ರೋಚಕ ಪಂದ್ಯವೊಂದರಲ್ಲಿ ಮೊದಲನೇ ಬೋರ್ಡ್‌ನಲ್ಲಿ ನಿತಿನ್ ಅವರನ್ನು ಎದುರಿಸಿದ ಸ್ಥಳೀಯ ಪ್ರತಿಭೆ ಶಾಬ್ದಿಕ್ ವರ್ಮ ಚೆಸ್ ಅಭಿಮಾನಿಗಳ ಮನಸೂರೆಗೊಳ್ಳುವಂತೆ ಆಡಿರುವುದ ಗಮನಾರ್ಹವಾಗಿತ್ತು. ಗೆಲ್ಲುವ ಹಂತಕ್ಕೆ ಬಂದರೂ 32ನೇಯ ನಂತರ ನಿತಿನ್ ತನ್ನ ಅನುಭವದ ಆಧಾರದಿಂದ ಹೆಚ್ಚಿನ ದಾಳಗಳನ್ನು ವಿನಿಮಯ ಮಾಡಿ ಜಯ ದಾಖಲಿಸಿದರು. ಸತತ ನಾಲ್ಕು ಘಂಟೆ ನಡೆದ ಸಿಸಿಲಿಯನ್ ಮಾದರಿಯ ಆಟದಲ್ಲಿ ಕೆಲವೊಂದು ಅಚ್ಚರಿಯ ನಡೆಯನ್ನು ನಡೆಸಿದ ಶಾಬ್ದಿಕ್ ಆಟದಲ್ಲಿ ಸೋತರೂ ಚೆಸ್ ಆಟಗಾರರು ಹಾಗೂ ಅಭಿಮಾನಿಗಳ ಮನ ಗೆದ್ದರು.