×
Ad

ಜಿಲ್ಲಾ ಸಾಹಿತ್ಯ ಸಮ್ಮೇಳನ ಸ್ವಾಗತ ಕಚೇರಿ ಉದ್ಘಾಟನೆ

Update: 2016-12-26 22:52 IST

ಮಂಗಳೂರು, ಡಿ.26:  ಜ.27, 28, 29ರಂದು ನಡೆಯುವ 21ನೆ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಕಚೇರಿಯನ್ನು ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಯು. ಜಯ ರಾಘವ ಪಡ್ವೆಟ್ನಾಯ ಉದ್ಘಾಟಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಮಾತನಾಡಿ, ಸ್ವಚ್ಛ ಭಾಷೆ, ಸ್ವಚ್ಛ ಜೀವನ, ಸ್ವಚ್ಛ ಭಾರತ ಸಾಹಿತ್ಯ ಸಮ್ಮೇಳನದ ಪರಿಕಲ್ಪನೆಯಾಗಿದೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಡಾ. ಬಿ. ಯಶೋವರ್ಮ, ಸಮ್ಮೇಳನದ ಕಾರ್ಯಾಧ್ಯಕ್ಷ ಪ್ರತಾಪಸಿಂಹ ನಾಯಕ್, ಎಂ.ಬಿ. ಪುರಾಣಿಕ್, ಜನಾರ್ದನ ಹಂದೆ, ವೆಂಕಟ್ರಾಯ ಅಡೂರು, ವೆಂಕಟರಮಣ ಹೆಬ್ಬಾರ್, ಸಂಪತ್ ಸುವರ್ಣ, ಶ್ರೀಧರ ಕೆ., ಇಚ್ಚಿಲ ಸುಂದರ ಗೌಡ, ಯದುಪತಿ ಗೌಡ, ಯು.ಸಿ. ಪೌಲೋಸ್, ಶರತಕೃಷ್ಣ, ಬಾಲಭಾಸ್ಕರ್ ಉಪಸ್ಥಿತರಿದ್ದರು.

ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ಡಾ. ಎಂ.ಎಂ. ದಯಾಕರ್ ಸಮಾಲೋಚನಾ ಸಭೆಯ ವರದಿ ಮಂಡಿಸಿದರು.

ಪರಿಷತ್ ಜಿಲ್ಲಾ ಗೌರವ ಕಾರ್ಯದರ್ಶಿ ಡಾ. ಎಂ.ಪಿ. ಶ್ರೀನಾಥ್ ಸ್ವಾಗತಿಸಿದರು.

ತಾಲೂಕು ಗೌರವ ಕಾರ್ಯದರ್ಶಿ ಅಶ್ರಫ್ ಅಲಿಕುಂಞಿ ಕಾರ್ಯಕ್ರಮ ನಿರೂಪಿಸಿದರು.

ಕೇಶವ ಬೆಳಾಲು ವಂದಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News