ಅಪರಿಚಿತ ವ್ಯಕ್ತಿ ಮೃತ್ಯು
Update: 2016-12-26 22:59 IST
ಉಡುಪಿ, ಡಿ.26: ಉಡುಪಿ ಶ್ರೀಕೃಷ್ಣಮಠದ ಟೂರಿಸ್ಟ್ ಕಾರು ಪಾರ್ಕಿಂಗ್ ಸ್ಥಳದಲ್ಲಿ ಡಿ.24ರಂದು ರಾತ್ರಿ ವೇಳೆ ಸುಮಾರು 45 ವರ್ಷ ಪ್ರಾಯದ ಅಪರಿಚಿತ ಗಂಡಸು ಮೃತಪಟ್ಟಿದ್ದಾರೆ.
ಮೃತರ ಬಳಿ ಆಸ್ಪತ್ರೆ ಚೀಟಿ ಸಿಕ್ಕಿದ್ದು ಅದರಲ್ಲಿ ಬಾಗಲಕೋಟೆ ಜಿಲ್ಲೆಯ ಬೆಳಗಿ ತಾಲೂಕಿನ ಸುರೇಶ(45) ಎಂದು ನಮೂದಾಗಿದೆ.
ಇವರು ಖಾಯಿಲೆ ಅಥವಾ ಇತರ ಕಾರಣದಿಂದ ಮೃತಪಟ್ಟಿರಬಹುದೆಂದು ಶಂಕಿಸ ಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ.