×
Ad

ಮುಲ್ಕಿ : ಸಾರ್ವಜನಿಕ ಕೆಂಡಸೇವೆ

Update: 2016-12-26 23:32 IST

ಮುಲ್ಕಿ, ಡಿ.25: ದೈವ ದೇವರುಗಳ ಆಚರಣೆಯಲ್ಲಿ ವಿವಿಧ ಸಂಪ್ರದಾಯಗಳನ್ನು ಸತ್ಯ ನಿಷ್ಠೆಯಿಂದ ಕಟ್ಟು ನಿಟ್ಟಾಗಿ ಪಾಲಿಸಿದಾಗ ಊರಿಗೆ ಹಾಗೂ ಜನರಿಗೆ ಅವರ ಅಭಯ ಸದಾ ಕಾಲ ಇರುವುದು ಎಂದು ದ.ಕ. ಲೋಕಸಭಾ ಸದಸ್ಯ ನಳಿನ್‌ಕುಮಾರ್ ಕಟೀಲ್ ಹೇಳಿದರು. 

 ಕೊಡೆತ್ತೂರು ಶ್ರೀ ಅರಸು ಕುಂಜರಾಯ ದೈವದ ಚೌತಿ ಹಬ್ಬ ಹಾಗೂ ಸಾರ್ವಜನಿಕ ಕೆಂಡಸೇವೆಯ ಪ್ರಯುಕ್ತ ರವಿವಾರ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.

ಈ ಸಂದರ್ಭ ಕೊಡೆತ್ತೂರು ಮೂಡುದೇವಸ್ಯ ವಿಶ್ವನಾಥ ಶೆಟ್ಟಿ, ಕೊಡೆತ್ತೂರು ಹರಿವೆಕಳ ಗೋಪಾಲ ಮೂಲ್ಯ ಅವರನ್ನು ಸನ್ಮಾನಿಸಲಾಯಿತು.  

ಕಟೀಲು ದೇವಳ ಪ್ರಧಾನ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ, ಕಟೀಲು ದೇವಳ ಆಡಳಿತ ಮೊಕ್ತೇಸರ ಕೊಡೆತ್ತೂರುಗುತ್ತು ಡಾ. ರವೀಂದ್ರನಾಥ ಪೂಂಜ, ಉದ್ಯಮಿ ಯಾದವ ಕೋಟ್ಯಾನ್ ಪೆರ್ಮುದೆ, ಸಿವಿಲ್ ಇಂಜಿನಿಯರ್ ತ್ಯಾಗರಾಜ್, ಕಟೀಲು ಪಂಚಾಯತ್ ಉಪಾಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ, ಮುಂಬಯಿ ಸಮಿತಿಯ ದಿವಾಕರ್ ಶೆಟ್ಟಿ, ಕೆಜಿ ಬೆಟ್ಟು, ಜಯಂತ್ ಶೆಟ್ಟಿ, ಭಾಸ್ಕರ್‌ದಾಸ್ ಎಕ್ಕಾರು ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News