×
Ad

ಬಾಳಿಗಾ ಪ್ರಕರಣ: ನ್ಯಾಯಾಲಯಕ್ಕೆ ಹೆಚ್ಚುವರಿ ಆರೋಪ ಪಟ್ಟಿ ಸಲ್ಲಿಕೆ

Update: 2016-12-26 23:36 IST

ಮಂಗಳೂರು, ಡಿ. 26: ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ನಗರದ ಮೂರನೆ ಪ್ರಥಮ ದರ್ಜೆ ನ್ಯಾಯಾಲಯಕ್ಕೆ 325 ಪುಟಗಳ ಹೆಚ್ಚುವರಿ ಆರೋಪ ಪಟ್ಟಿ ಸಲ್ಲಿಸಿದ್ದಾರೆ.
   
ಆರೋಪ ಪಟ್ಟಿಯಲ್ಲಿ 130 ಸಾಕ್ಷಿಗಳ ವಿಚಾರಣೆಯನ್ನು ನೀಡಲಾಗಿದ್ದು ತನಿಖಾಧಿಕಾರಿಯಾಗಿರುವ ಎಸಿಪಿ ಉದಯನಾಯಕ್ ಈ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ವಿಧಿವಿಜ್ಞಾನ ವರದಿ ಮತ್ತಿತರ ಮಹತ್ವದ ದಾಖಲೆಗಳ ಸಹಿತ ಇನ್ನೂ ಹೆಚ್ಚಿನ ಆರೋಪಪಟ್ಟಿ ಸಲ್ಲಿಸಲು ಅವಕಾಶವಿರುವುದಾಗಿ ತಿಳಿದುಬಂದಿದೆ. ಹಿಂದಿನ ತನಿಖಾಧಿಕಾರಿಯಾಗಿದ್ದ ಎಸಿಪಿ ತಿಲಕ್‌ಚಂದ್ರ ಅವರು ಈ ಹಿಂದೆ 750 ಪುಟಗಳ ಪ್ರಥಮ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು.

 ಹೆಚ್ಚುವರಿ ಪಟ್ಟಿಯಲ್ಲಿ ನಗರದ ವಿಠೋಬ ದೇವಸ್ಥಾನದ ಲಾಕರ್ ಒಡೆದಿರುವ ಪ್ರಕರಣ, ಕೊಲೆಯಾದ ವಿನಾಯಕ ಅವರು ಪ್ರತಿಷ್ಠಾನದ ಪ್ರಮುಖರಾದ ಅತುಲ್ ಕುಡ್ವ ಅವರಿಗೆ ಆರೋಪಿ ನರೇಶ್‌ರನ್ನು ಸಮಿತಿಯಿಂದ ಬಿಡುವಂತೆ ಬರೆದಿರುವ ಪತ್ರ ಮೊದಲಾದ ಮಹತ್ವದ ವಿಚಾರಗಳನ್ನು ಉಲ್ಲೇಖಿಸಲಾಗಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News