ಜ.13-15: ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿ
Update: 2016-12-26 23:40 IST
ಮಂಗಳೂರು, ಡಿ.26: ನಗರದ ಮಂಗಳಾ ಬ್ಯಾಡ್ಮಿಂಟನ್ ಕ್ಲಬ್ ವತಿಯಿಂದ ಕರ್ನಾಟಕ, ಕೇರಳ ರಾಜ್ಯಗಳ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯು ಜ.13ರಿಂದ 15ರವರೆಗೆ ನಗರದ ಯು.ಎಸ್.ಮಲ್ಯ ಒಳಾಂಗಣದಲ್ಲಿ ನಡೆಯಲಿದೆ.
ವಿಜೇತರು 4,45,900 ರೂ. ನಗದು ಬಹುಮಾನ ಗೆಲ್ಲಲಿದ್ದಾರೆ. ಹೆಸರು ನೋಂದಣಿಗೆ ಜ.10 ಕೊನೆಯ ದಿನವಾಗಿದೆ. ಹೆಸರು ನೋಂದಾಯಿಸಲು ಇಚ್ಛಿಸುವರು ಮೊ.:9148725877 ಅಥವಾ ಇ-ಮೇಲ್: mbcmangalore@gmail.comನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.