ಆಳ್ವಾಸ್ ಎನ್‌ಎಸ್‌ಎಸ್ ಶಿಬಿರ ಸಮಾಪನ
ಮೂಡುಬಿದಿರೆ, ಡಿ.26 : ಜ್ವಲಂತವಾಗಿರುವ ನೀರು ಮತ್ತು ಕಸದ ಸಮಸ್ಯೆಯನ್ನು ನೀಗಿಸುವುದು ಎಲ್ಲರ ಆದ್ಯ ಕರ್ತವ್ಯ. ಎನ್‌ಎಸ್‌ಎಸ್ ಶಿಬಿರದಿಂದ ಕೇವಲ ಆಟದ ಮೈದಾನ ಹಾಗೂ ಹೂತೋಟದ ನಿರ್ಮಾಣ ಮಾಡುವುದಲ್ಲ. ಶಿಬಿರಗಳಿಂದ ಫಲಪ್ರದವಾಗುವಂತಹ ಕೆಲಗಳನ್ನು ಕೈಗೊಂಡಾಗ ಮಾತ್ರ ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯನ್ನು ಹೊಂದಲು ಸಾಧ್ಯ. ಆ ನಿಟ್ಟಿನಲ್ಲಿ ತೆಂಕಮಿಜಾರು ಗ್ರಾ.ಪಂ ವ್ಯಾಪ್ತಿಯಲ್ಲಿ ಶಿಬಿರಾರ್ಥಿಗಳು ಹರಿದು ಹೋಗುತ್ತಿರುವ ನೀರಿಗೆ ಒಡ್ಡುಗಳನ್ನು ನಿರ್ಮಿಸುವ ಮೂಲಕ ಅಂತರ್‌ಜಲವನ್ನು ವೃದ್ಧಿಸಿ ಮುಂದೆ ಎದುರಾಗಬಹುದಾದ ಜಲಕ್ಷಾಮವನ್ನು ದೂರಮಾಡುವಂತಹ ಕೆಲಸವನ್ನು ಕೈಗೊಂಡಿರುವುದು ಪ್ರಶಂಸನೀಯವಾಗಿದ್ದು ಇಂತಹ ಮಾದರಿ ಕಾರ್ಯಕ್ರಮಗಳು ಪ್ರೇರಣೆಯಾಗಲಿ ಎಂದು ತೆಂಕಮಿಜಾರು ಪಿಡಿಒ ಸಾಯೀಶ್ ಚೌಟ ಆಶಯ ವ್ಯಕ್ತಪಡಿಸಿದರು.
ಮಿಜಾರಿನ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಒಂದು ವಾರ ನಡೆದ ಆಳ್ವಾಸ್ ಪದವಿ ಕಾಲೇಜಿನ ಎನ್‌ಎಸ್‌ಎಸ್ ಘಟಕದ 2016-17ನೇ ಸಾಲಿನ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸೋಮವಾರ ಸಮಾರೋಪ ಭಾಷಣ ಮಾಡಿದರು. ತೆಂಕಮಿಜಾರು ಪಂಚಾಯತ್ ಪಂಚಾಯತ್ ಸ್ವಚ್ಛ ಮಿಜಾರು ಅಭಿಯಾನದಲ್ಲಿ ಆಳ್ವಾಸ್ ಸಂಸ್ಥೆಯ ಬೆಂಬಲದೊಂದಿಗೆ ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಜಲ, ನೆಲದ ಸಂರಕ್ಷಣೆಗಾಗಿ ವಿದ್ಯಾರ್ಥಿಗಳು ಸದಾ ಹೆಚ್ಚಿನ ಆಸಕ್ತಿಯನ್ನು ತೋರುವಂತ್ತಾಗಲಿ ಎಂದರು.
ಮೂಡುಬಿದಿರೆಯ ರಾಜೇಶ್ವರಿ ಇನ್ಫ್ರಾಟೆಕ್‌ನ ದೇವಿ ಪ್ರಸಾದ್ ಶೆಟ್ಟಿ ಮುಖ್ಯ ಅತಿಥಿಯಾಗಿ ಮಾತನಾಡಿ, ನಾವು ಕೆಲವೊಂದು ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಸಮಾಜದಿಂದ ನಾವು ಪಡೆದುಕೊಳ್ಳುವುದಕ್ಕಿಂತ ನಾವು ಸಮಾಜಕ್ಕೆ ಕೊಡುಗೆಯನ್ನು ನೀಡಿದಾಗ ಹೆಚ್ಚಿನ ಸಂತಸ ದೊರಕುತ್ತದೆ. ಆದ್ದರಿಂದ ಸೇವಾ ಮನೋಭಾವನೆ ನಮ್ಮನ್ನು ಪರಿಪೂರ್ಣತೆ ಕಡೆಗೆ ಕೊಂಡೊಯ್ಯುವ ಮಾರ್ಗ ಎಂದು ಅಭಿಪ್ರಾಯಪಟ್ಟರು. ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಸಮಾರಂಭದ ಅಧ್ಯಕ್ಷತೆ ವಹಿಸಿ ನೀರಿನ ಕಡಿಮೆ ಬಳಕೆ, ಈಗ ನಿರ್ಮಿಸಿರುವ ಒಡ್ಡುಗಳನ್ನು ಮುಂದಿನ ಶಿಬಿರಾರ್ಥಿಗಳಿಗೆ ಪರಿಚಯ ಪ್ರಕ್ರಿಯೆ, ಅಪಾಯಕಾರಿ ಪರಿಸ್ಥಿತಿಯಲ್ಲಿರುವ ವಿದ್ಯಾರ್ಥಿಗಳ ಬದಲಾವಣೆ ಹಾಗೂ ದಿನಚರಿಗಳನ್ನು ಅರ್ಥಮಾಡಿಕೊಂಡು ನಮ್ಮನ್ನು ನಾವು ತಿಳಿದುಕೊಳ್ಳಬೇಕೆಂದರು.
ಮಣಿಪಾಲ್ ಮೀಡಿಯಾ ನೆಟ್‌ವರ್ಕ್‌ನ ಉಪಾಧ್ಯಕ್ಷ ರಾಮಚಂದ್ರ ಮಿಜಾರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ತೆಂಕಮಿಜಾರು ಗ್ರಾಮ ಪಂಚಾಯಿತಿ ಸದಸ್ಯ ಹರಿಪ್ರಸಾದ್ ಶೆಟ್ಟಿ ಮುಖ್ಯ ಅತಿಥಿಯಾಗಿದ್ದರು.
ಶಿಬಿರಾಧಿಕಾರಿ ಪ್ರೊ.ಗುರುದೇವ ಎನ್., ಸಹಶಿಭಿರಾಧಿಕಾರಿಗಳಾದ ನವ್ಯಾ, ಆಶಾಲತಾ, ಸ್ವಯಂ ಸೇವಕ ಪದಾಧಿಕಾರಿಗಳಾದ ಅವಿನಾಶ್, ಹೃಷಿಕೇಶ್, ಸಂಶದ್ ,ಶಿಲ್ಪಾ ಉಪಸ್ಥಿತರಿದ್ದರು, ಶುಭಶ್ರೀ ಸ್ವಾಗತಿಸಿದರು.
ಕಾರ್ಯಕ್ರಮ ಸಂಯೋಜನಾಧಿಕಾರಿ ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು
. ಶಿಲ್ಪಾ ಕಾರ್ಯಕ್ರಮ ನಿರೂಪಿಸಿದರು.
ಸಂಶದ್, ರಕ್ಷಿತ್, ಮಧು ಅನಿಸಿಕೆ ವ್ಯಕ್ತಪಡಿಸಿದರು.
ರಮ್ಯ ವಂದಿಸಿದರು.
ಒಂದು ವಾರದ ಶಿಬಿರದಲ್ಲಿ ಆಯುರ್ವೇದ ಜೀವನ ಪದ್ಧತಿಯ ಬಗ್ಗೆ ಡಾ.ಎಸ್.ಜಿ ಪ್ರಸನ್ನ ಐತಾಳ್, ಜಾನಪದ ಹಾಡು ಹಾಗೂ ಪ್ರಾತ್ಯಕ್ಷಿಕೆಯನ್ನು ರಾಮಕೃಷ್ಣ ಶೆಟ್ಟಿ, ಗೀತ ಸಾಹಿತ್ಯ ವೈವಿಧ್ಯ ಕುರಿತು ವಿಠಲ ನಾಯ್ಕಿ, ಸ್ವದ್ಯೋಗ ಮಾಹಿತಿ ಕಾರ್ಯಕ್ರವನ್ನು ಅಬ್ರಾಹಂ ಜೇಮ್ಸ್‌ಮ ಬಳಕೆದಾರರ ಹಕ್ಕುಗಳ ಕುರಿತು ಯತಿರಾಜ್ ಶೆಟ್ಟಿ, ನುಡಿ ಸಂಸ್ಕೃತಿಯ ಕುರಿತು ಡಾ.ಪುಂಡಿಕಾ ಗಣಪಯ್ಯ ಭಟ್ ಉಪನ್ಯಾಸ ನೀಡಿದರು.