ಮನೆ ಬಾಗಿಲು ಮುರಿದು ನಗ,ನಗದು ಕಳವು
Update: 2016-12-26 23:51 IST
ಪುತ್ತೂರು , ಡಿ.26 : ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ನಗ ಮತ್ತು ನಗದು ಕಳ್ಳತನ ನಡೆಸಿದ ಘಟನೆ ಸೋಮವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಪುತ್ತೂರು ತಾಲೂಕಿನ ಬನ್ನೂರು ಗ್ರಾಮದ ಬನ್ನೂರು ಕಟ್ಟೆ ನಿವಾಸಿ ಮಹಾಲಿಂಗ ಪಾಟಾಳಿ ಎಂಬವರ ಮನೆಯ ಮುಂಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಮನೆಯಲ್ಲಿದ್ದ ಕಪಾಟಿನ ಬೀಗ ಮುರಿದು ಅದರೊಳಗೆ ಇರಿಸಲಾಗಿದ್ದ ರೂ. 20 ಸಾವಿರ ನಗದು ಹಾಗೂ 1ಬೆಳ್ಳಿತಟ್ಟೆ ಮತ್ತು 12 ಬೆಳ್ಳಿ ನಾಣ್ಯಗಳನ್ನು ಕಳವು ನಡೆಸಿದ್ದಾರೆ.
ಮನೆ ಮಂದಿ ಶನಿವಾರ ಮನೆಗೆ ಬೀಗ ಹಾಕಿ ಕುಟುಂಬಸ್ಥರ ಮನೆಗೆ ತೆರಳಿದ್ದರು. ಸೋಮವಾರ ಬಂದಾಗ ಘಟನೆ ಬೆಳಕಿಗೆ ಬಂದಿತ್ತು.