×
Ad

ನಾಪತ್ತೆಯಾಗಿದ್ದ ಮಹಿಳೆ ಪತ್ತೆ

Update: 2016-12-26 23:54 IST

ಪುತ್ತೂರು , ಡಿ.26 : ಕಳೆದ ಒಂದೂವರೆ ವರ್ಷದ ಹಿಂದೆ ನಾಪತ್ತೆಯಾಗಿದ್ದ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಕಡ್ತಿಮಾರು ನಿವಾಸಿ ಮಹಿಳೆಯನ್ನು ಸಂಪ್ಯ ಪೊಲೀಸರು ಕೊಡಗು ಜಿಲ್ಲೆಯ ನಾವೊಕ್ಲು ಎಂಬಲ್ಲಿ ಪತ್ತೆ ಹಚ್ಚಿದ್ದಾರೆ.

ತನ್ನ ಪ್ರಿಯಕರನ ಜೊತೆ ಪತ್ತೆಯಾದ ಮಹಿಳೆಯನ್ನು ಠಾಣೆಗೆ ಕರೆಸಿಕೊಂಡು ವಿಚಾರಣೆ ನಡೆಸಿ ಕಳುಹಿಸಿಕೊಟ್ಟಿದ್ದಾರೆ. ಪುತ್ತೂರು ತಾಲ್ಲೂಕಿನ ಒಳಮೊಗ್ರು ಗ್ರಾಮದ ಕಡ್ತಿಮಾರು ನಿವಾಸಿ ಕೃಷ್ಣಪ್ಪ ಪೂಜಾರಿ ಅವರ ಪತ್ನಿ ಉಮಾವತಿ (45) ನಾಪತ್ತೆಯಾಗಿದ್ದ ಮಹಿಳೆ.

ಉಮಾವತಿ ಅವರು ಕಳೆದ 2015ರ ಜೂನ್.15ರಂದು ಬೆಳಿಗ್ಗೆ ಗಾರ್ಬಲ್ ಒಂದಕ್ಕೆ ಕೆಲಸಕ್ಕೆಂದು ಮನೆಯಿಂದ ಹೊರಟು ಹೋದವರು ನಾಪತ್ತೆಯಾಗಿದ್ದರು. ಈ ಕುರಿತು ಅವರ ಪುತ್ರಿ ಗುಲಾಬಿ ಎಂಬವರು ಸಂಪ್ಯ ಪೊಲೀಸರಿಗೆ ದೂರು ನೀಡಿದ್ದರು.

ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅವರ ಪತ್ತೆಗಾಗಿ ಸುಳ್ಯ, ಮಡಿಕೇರಿ, ಮೈಸೂರು, ಕೇರಳದ ಕಾಸರಗೋಡು ಮೊದಲಾದ ಪ್ರದೇಶಗಳಿಗೆ ತೆರಳಿ ಹುಡುಕಾಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಪ್ರಕರಣದ ಕುರಿತು ಮಾಹಿತಿ ಸಂಗ್ರಹಿಸಿದ ಸಂಪ್ಯ ಪೊಲೀಸರು ಗ್ರಾಮಾಂತರ ಪೊಲೀಸ್ ಇನ್ಸ್‌ಪೆಕ್ಟರ್ ಅನಿಲ್ ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ ಸಂಪ್ಯ ಎಸ್‌ಐ ಅಬ್ದುಲ್ ಖಾದರ್, ಹೆಡ್‌ಕಾನ್‌ಸ್ಟೇಬಲ್ ಮೋಹನ್ ಹಾಗೂ ಕಾನ್‌ಸ್ಟೇಬಲ್ ಸತೀಶ್ ಅವರು ಕೊಡಗು ಜಿಲ್ಲೆಯ ನಾವೊಕ್ಲುವಿಗೆ ಭಾನುವಾರ ತೆರಳಿ ನಾವೊಕ್ಲುವಿನ ಪರಂಬು ಎಂಬಲ್ಲಿನ ಬಾಡಿಗೆ ಮನೆಯೊಂದರಲ್ಲಿ ಬಾಲಕೃಷ್ಣ ಪೂಜಾರಿ ಎಂಬಾತನ ಜೊತೆ ವಾಸ್ತವ್ಯವಿದ್ದ ಉಮಾವತಿ ಅವರನ್ನು ಪತ್ತೆ ಮಾಡಿ ಅಲ್ಲಿಂದ ಕರೆದುಕೊಂಡು ಬಂದು ಭಾನುವಾರ ಗ್ರಾಮಾಂತರ ಪೊಲೀಸ್ ಇನ್ಸ್‌ಪೆಕ್ಟರ್ ಅನಿಲ್ ಕುಲಕರ್ಣಿ ಅವರ ಮುಂದೆ ಹಾಜರುಪಡಿಸಿದ್ದಾರೆ.

ಉಮಾವತಿ ಅವರು ಪೂಜಾರಿ ಪುತ್ತೂರು ತಾಲೂಕಿನ ಮಾಡ್ನೂರು ಗ್ರಾಮದ ಕಾವು ಎಂಬಲ್ಲಿನ ನಿವಾಸಿ ಬಾಲಕೃಷ್ಣ ಪೂಜಾರಿ ಎಂಬವರೊಂದಿಗೆ ನಾವೊಕ್ಲುವಿನಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸ್ತವ್ಯವಿದ್ದರೆಂದು ಪೊಲೀಸ್ ವಿಚಾರಣೆಯಿಂದ ತಿಳಿದು ಬಂದಿದೆ. ಈ ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರು ಉ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News