×
Ad

ವಿಜಯಾ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರ

Update: 2016-12-26 23:57 IST

ಮುಲ್ಕಿ, ಡಿ.26: ಅಭಿವೃದ್ಧಿಯ ಪಥದಲ್ಲಿರುವ ದೇಶಕ್ಕೆ ಯುವ ನೇತಾರರ ನಾಯಕತ್ವದದ ಅಗತ್ಯವಿದೆ. ಈ ನಾಯಕತ್ವದ ಗುಣ ರಾಷ್ಟ್ರೀಯ ಸೇವಾ ಯೋಜನೆಯ ಮುಖಾಂತರ ಗಳಿಸಲು ಸಾಧ್ಯ ಎಂದು ಮುಲ್ಕಿ ಮೂಡುಬಿದಿರೆ ಶಾಸಕ ಅಭಯಚಂದ್ರ ಜೈನ್ ಹೇಳಿದರು.

ಕರ್ನಿರೆ ದ.ಕ. ಜಿ. ಪಂ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಲ್ಕಿ ವಿಜಯಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಧರ್ಮ ಜಾರಂದಾಯ ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಕರ್ನಿರೆ ಹರಿಶ್ಚಂದ್ರ ಶೆಟ್ಟಿ, ದೀಪ ಬೆಳಗಿಸಿ ಯೋಜನಾ ಶಿಭಿರ ಉದ್ಘಾಟಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲ ಡಾ.ನಾರಾಯಣ ಪೂಜಾರಿ ವಹಿಸಿದ್ದರು.

ಮುಂಬೈ ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಕರ್ನಿರೆ, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷೆ ಶಮಿನಾ ಜಿ.ಆಳ್ವಾ, ಅತಿಕಾರಿಬೆಟ್ಟು ಗ್ರಾಮ ಪಂ.ಉಪಾಧ್ಯಕ್ಷ ಕಿಶೋರ್ ಶೆಟ್ಟಿ ದೆಪ್ಪುಣಿ ಗುತ್ತು, ಕಿನ್ನಿಗೋಳಿ ಗ್ರಾಮ ಪಂ. ಸದಸ್ಯ ದೇವ ಪ್ರಸಾದ್ ಪುನರೂರು, ಕಾಲೇಜು ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಅನಸೂಯ ಟಿ.ಕರ್ಕೇರಾ, ಕರ್ನಿರೆ ಶಾಲಾ ಶಿಕ್ಷಕರಕ್ಷಕ ಸಂಘದ ಅಧ್ಯಕ್ಷೆ  ವಿಶಾಲಾಕ್ಷಿ, ತಾಪಂ.ಸದಸ್ಯೆ ರಶ್ಮಿ ಆಚಾರ್ಯ, ಬಳಕುಂಜೆ ಗ್ರಾಮ ಪಂ ಸದಸ್ಯರಾದ ಜಯಲಕ್ಷ್ಮೀ, ಪ್ರಭಾಕರ ಶೆಟ್ಟಿ, ಕರ್ನಿರೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ರವೀಂದ್ರ ಶೆಟ್ಟಿ, ಶಾಲಾ ಮುಖ್ಯ ಶಿಕ್ಷಕಿ ಪ್ರಭಾವತಿ ಪಿ., ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಪ್ರೊ. ವೆಂಕಟೇಶ ಭಟ್ ಮತ್ತಿತರರು ಉಪಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News