ಸಿರಿಯ ಯುದ್ಧ ನಿಲ್ಲಿಸಿ: ಪೋಪ್‌ರಿಂದ ಕ್ರಿಸ್‌ಮಸ್ ಸಂದೇಶ
Update: 2016-12-27 14:02 IST
ವ್ಯಾಟಿಕನ್ ಸಿಟಿ,ಡಿ.27: ಸಿರಿಯ ಯುದ್ಧ ಕೊನೆಗೊಳಿಸಬೇಕೆಂದು ಪೋಪ್ ಫ್ರಾನ್ಸಿಸ್ ಕ್ರಿಸ್ಮಸ್ ಸಂದೇಶ ನೀಡಿದ್ದಾರೆ. ಈಗಾಗಲೇ ಅಲ್ಲಿ ಬಹಳಷ್ಟು ರಕ್ತ ಹರಿದಿದೆ. ಅಂತಾರಾಷ್ಟ್ರೀಯ ಸಮುದಾಯ ಮಾತುಕತೆ ಮೂಲಕ ಯುದ್ಧ ಕೊನೆಗೊಳ್ಳುವಂತಾಗಲು ಪ್ರಯತ್ನಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ವ್ಯಾಟಿಕನ್ ಸೈಂಟ್ ಪೀಟರ್ಸ್ ಬರ್ಗ್‌ನಲ್ಲಿ 40,000ಕ್ಕೂ ಹೆಚ್ಚು ಜನರು ಸೇರಿದ್ದ ಸಭೆಯನ್ನು ಉದ್ದೇಶಿಸಿ ಅವರು ಮಾತಾಡುತ್ತಿದ್ದರು.
ಇಸ್ರೇಲ್ ಫೆಲೆಸ್ತೀನ್ ಸಮಸ್ಯೆ ಕೊನೆಗೊಳಿಸಿ ಇತಿಹಾಸದಲ್ಲಿ ಹೊಸ ಅಧ್ಯಾಯ ರಚಿಸಬೇಕು. ಹುಲ್ಲುಗೂಡಿನಲ್ಲಿ ಹುಟ್ಟಿದ ಬಾಲಯೇಸುವಿನ ಸರಳತನ, ವಿನಯಗಳ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿರಿ ಎಂದು ವಿಶ್ವಾಸಿಗಳಿಗೆ ಪೋಪ್ ಕರೆ ನೀಡಿದ್ದಾರೆಂದು ವರದಿ ತಿಳಿಸಿದೆ.