×
Ad

ಸುರತ್ಕಲ್ : ಹಿಂದೂ ರುದ್ರಭೂಮಿ ಲೋಕಾರ್ಪಣೆ

Update: 2016-12-27 17:30 IST

ಸುರತ್ಕಲ್, ಡಿ.27: ಅಭಿವೃದ್ಧಿ ಪರ ಚಿಂತನೆಗಳಿಂದ ಯಶಸ್ಸು ಸಾಧ್ಯ ಎಂದು ಶಾಸಕ ಬಿ.ಎ ಮೊಹಿಯುದ್ದೀನ್ ಬಾವಾ ಹೇಳಿದ್ದಾರೆ. 

ಅವರು ಕಾಟಿಪಳ್ಳ ಹಿಂದೂ ರುದ್ರಭೂಮಿ ನವೀಕರಣ ಸಮಿತಿ ಅಶ್ರಯದಲ್ಲಿ ಜರಗಿದ ಸುಮಾರು 20.25 ಲಕ್ಷ ರೂ. ವೆಚ್ಚದಲ್ಲಿ ನವೀಕರಣ ಗೊಂಡ ಹಿಂದೂ ರುದ್ರಭೂಮಿ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ನವೀಕೃತ ಹಿಂದೂ ರುದ್ರಭೂಮಿಯ ನಿರ್ವಹಣೆ ಹಾಗೂ ಸ್ವಚ್ಚತೆಯ ಕಡೆಗೆ ಸಾರ್ವಜನಿಕರು ಸಹಕರಿಸಬೇಕು. ರುದ್ರಭೂಮಿ ಪರಿಸರ ಭಯಮುಕ್ತವಾಗಿರಬೇಕಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳಿಗೆ ಪೂರಕವಾಗಿ ಸ್ಪಂದಿಸುವುದಾಗಿ ಅವರು ಭರವಸೆ ನೀಡಿದರು.

  ಹಿಂದೂ ರುದ್ರಭೂಮಿ ನವೀಕರಣ ಸಮಿತಿಯ ಸಂಚಾಲಕ ಎ.ಪಿ ಮೋಹನ್ ಮಾತನಾಡಿ, ಭಕ್ತಿ ಮೂಡಿಸುವ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ರುದ್ರಭೂಮಿಯ ಭಯಮುಕ್ತ ವಾತಾವರಣವನ್ನಾಗಿಸುವ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ರುದ್ರಭೂಮಿಯನ್ನು ಮಾದರಿಯಾಗಿ ಅಭಿವೃದ್ಧಿಪಡಿಸಿ ನವೀಕೃತಗೊಳಿಸಲಾಗಿದೆ ಎಂದರು.

    ಮನಪಾ ಸದಸ್ಯ ಬಶೀರ್ ಅಹ್ಮದ್, ಮಾಜಿ ಮೇಯರ್ ಗಣೇಶ ಹೊಸಬೆಟ್ಟು, ಪ್ರತಿಭಾ ಕುಳಾಯಿ, ಗುಣಶೇಖರ ಶೆಟ್ಟಿ, ದಲಿತ ಸಂಘರ್ಷ ಸಮಿತಿ ಸಂಚಾಲಕ ಶ್ರೀಧರ ದಡ್ಡಲಕಾಡು, ಸಹಾಯಕ ಅಭಿಯಂತರ ರವಿಶಂಕರ್, ಕಿರಿಯ ಅಭಿಯಂತರ ಅಬ್ದುಲ್ ಖಾದರ್, ಗುತ್ತಿಗೆದಾರ ವಿಜಯ ಕುಮಾರ್ ಅಮೀನ್, ಕಾಟಿಪಳ್ಳದ ಹಿಂದೂ ರುದ್ರಭೂಮಿ ನವೀಕರಣ ಸಮಿತಿಯ ಲೆಕ್ಕಪರಿಶೋಧಕ ದೇವದಾಸ್ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.
  
ಪರಿಸರದ ಅಭಿವೃದ್ಧಿ ಯೋಜನೆಗಳ ಶೀಘ್ರ ಅನುಷ್ಠಾನದ ಹಿನ್ನೆಲೆಯಲ್ಲಿ ಸಮಿತಿ ವತಿಯಿಂದ ಶಾಸಕ ಬಿ.ಎ ಮೊಯ್ದಿನ್ ಬಾವಾ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News